ಸೋಮವಾರಪೇಟೆ, ಫೆ. ೪: ಕೊಡಗಿನ ಮಟ್ಟಿಗೆ ಬಹು ನಿರೀಕ್ಷಿತವಾಗಿದ್ದ ರೋಪ್‌ವೇ-ಕೇಬಲ್ ಕಾರ್ ಯೋಜನೆಗೆ ಮತ್ತೆ ಜೀವಕಳೆ ಬಂದಿದ್ದು, ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದ ಬಳಿ ಕೇಬಲ್ ಕಾರ್ ಯೋಜನೆ ಅನುಷ್ಠಾನ ಸಂಬAಧ ರಾಜ್ಯ ಪ್ರವಾಸೋದ್ಯಮ ಇಲಾಖಾ ಸಚಿವ ಹೆಚ್.ಕೆ. ಪಾಟೀಲ್ ಬೆಂಗಳೂರಿನಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ.
ಈಗಾಗಲೇ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಮಲ್ಲಳ್ಳಿ ಜಲಪಾತ ದಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನ ಸಂಬAಧ ವಿಧಾನ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಯೋಜನೆ ಸಂಬAಧ ವ್ಯವಹಾರ ಸಲಹೆಗಾರರನ್ನು ನೇಮಿಸಿ, ಕಾರ್ಯಾದೇಶ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಮಲ್ಲಳ್ಳಿಯಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನದ ದಿನಗಳು ಹತ್ತಿರವಾದಂತಾಗಿದೆ.
೨೦೧೨ರಿAದಲೂ ಇತ್ತು ಪ್ರಸ್ತಾಪ: ಕಳೆದ ೨೦೧೨ರಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಯೋಜಿಸಿದ್ದ ‘ಇನ್ವೆಸ್ರ‍್ಸ್ ಮೀಟ್-೨೦೧೨’ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಮಲ್ಲಳ್ಳಿ ಜಲಪಾತದ ಬಳಿ ಕೇಬಲ್ ಕಾರ್ ಯೋಜನೆ ಅನುಷ್ಠಾನ ಸಂಬAಧ ಚರ್ಚೆಗಳು ನಡೆದಿದ್ದವು.
ಅಂದಿನ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗಿದ್ದ ಸಂಸ್ಥೆಗಳು, ಸಾವಿರಾರು ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದ್ದವು.
ಈ ಸಮಯದಲ್ಲಿಯೇ ಪುಷ್ಪಗಿರಿ ಪವರ್ ಅಂಡ್ ಮಲ್ಲಳ್ಳಿ ಫಾಲ್ಸ್ ಟೂರಿಸಂ ಲಿಮಿಟೆಡ್ ಕಂಪೆನಿಯವರು ಮಲ್ಲಳ್ಳಿಯಲ್ಲಿ ಕೇಬಲ್ ಕಾರ್ ಯೋಜನೆಗೆ ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದರು. ಆದರೆ ಸ್ಥಳೀಯ ಕೆಲವರು ಯೋಜನೆಗೆ ಆರಂಭದಲ್ಲಿಯೇ ಅಡ್ಡಗಾಲು ಹಾಕಿ ವಿರೋಧ ವ್ಯಕ್ತಪಡಿಸಿದ್ದರಿಂದ ಬಂಡವಾಳ ಹೂಡಿಕೆಯ ಕಂಪೆನಿ ಹಿಂದೇಟು ಹಾಕಿತ್ತು. ಆದರೂ ಪಟ್ಟು ಬಿಡದ ಸಂಸ್ಥೆ ಮಲ್ಲಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಕೇಬಲ್ ಕಾರ್ ಯೋಜನೆ ಅನುಷ್ಠಾನಗೊಳ್ಳುವ ಸ್ಥಳಗಳನ್ನು ಖರೀದಿಸಿದ್ದು, ಉನ್ನತಮಟ್ಟದಲ್ಲಿ ವ್ಯವಹರಿಸಿ ಅಂತಿಮವಾಗಿ ಕಾರ್ಯಾದೇಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.
ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸಿರು ನಿಶಾನೆ ತೋರಿದ್ದು, ಮುಂದಿನ ಮಳೆಗಾಲ ಕಳೆದ ನಂತರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆಯಿದೆ. ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ರಾಜ್ಯ ಪ್ರವಾಸೋದ್ಯಮ ಇಲಾಖಾ ಸಚಿವ ಹೆಚ್.ಕೆ. ಪಾಟೀಲ್ ಅವರು, ರಾಜ್ಯದ ೧೧ ಕಡೆಗಳಲ್ಲಿ ರೋಪ್ ವೇ ನಿರ್ಮಾಣಕ್ಕೆ ಚಿಂತಿಸಲಾಗಿದ್ದು, ಆರಂಭಿಕವಾಗಿ ಮೂರು ಕಡೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅದರಂತೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತ, ಮಧುಗಿರಿ ಬೆಟ್ಟ, ಸವದತ್ತಿ ಎಲ್ಲಮ್ಮ ಬೆಟ್ಟಗಳಲ್ಲಿ ರೋಪ್ ವೇ ಯೋಜನೆಗೆ ವ್ಯವಹಾರ ಸಲಹೆಗಾರರನ್ನು ನೇಮಿಸಲಾಗಿದೆ. ಈ ಯೋಜನೆ ಅನುಷ್ಠಾನ ಸಂಬAಧ ಹಕ್ಕುದಾರಿಕೆಯವರು ಮುಂದೆ ಬಂದಿದ್ದು, ಕಾರ್ಯಾದೇಶ ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ಒದಗಿಸಿದ್ದಾರೆ.
ಮಲ್ಲಳ್ಳಿ-ಸುಬ್ರಹ್ಮಣ್ಯಕ್ಕೆ ಸಂಪರ್ಕ: ಪುಷ್ಪಗಿರಿ ಪವರ್ ಅಂಡ್ ಮಲ್ಲಳ್ಳಿ ಫಾಲ್ಸ್ ಟೂರಿಸಂ ಲಿಮಿಟೆಡ್ ಹಾಗೂ ಹೈ ಆಕ್ಟೇನ್ ವರ್ಲ್ಡ್ ವೈಡ್ ಕಾಫಿ ಲಿಮಿಟೆಡ್ ಸಂಸ್ಥೆಯ ಮೂಲಕ ಬಂಡವಾಳ ಹೂಡಿಕೆಗೆ ಸಿದ್ಧತೆಗಳು ನಡೆದಿದ್ದು, ನಿರೀಕ್ಷೆಯಂತೆ ಯೋಜನೆ ಅನುಷ್ಠಾನಗೊಂಡರೆ ಮಲ್ಲಳ್ಳಿಯಿಂದ ಸುಬ್ರಹ್ಮಣ್ಯದವರೆಗೆ ಕೇಬಲ್ ಕಾರ್‌ನಲ್ಲಿ ಪ್ರಯಾಣಿಸಬಹುದಾಗಿದೆ.
ರೋಪ್ ವೇ ಸಾಗುವ ಜಾಗ ವನ್ನು ಈಗಾಗಲೇ ಸಂಸ್ಥೆ ಖರೀದಿಸಿದ್ದು, ಈವರೆಗಿನ ಸಕ್ಷಮ ಪ್ರಾಧಿಕಾರಗಳಿಂದಲೂ ಅನುಮತಿ ಪಡೆದಿದೆ. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಳ್ಳಿ ಗ್ರಾಮದ ಮಲ್ಲಳ್ಳಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆ ಬೆಟ್ಟದಳ್ಳಿ ಗ್ರಾ.ಪಂ. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಿಂದ ಈಗಾಗಲೇ ನಿರಾಕ್ಷೇಪಣಾ ಪತ್ರವನ್ನೂ ಸಂಸ್ಥೆ ಪಡೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಲ್ಲಳ್ಳಿ ಜಲಪಾತದ ಬಳಿಯಿಂದ ಸುಬ್ರಹ್ಮಣ್ಯ ದೇವಾಲಯ ಸಮೀಪದವರೆಗೆ ಕೇಬಲ್ ಕಾರ್ ವ್ಯವಸ್ಥೆ ಕಲ್ಪಿಸಲು ಸಂಸ್ಥೆ ಚಿಂತನೆ ಹರಿಸಿದೆ. ಇದಕ್ಕಾಗಿ ಈಗಾಗಲೇ ೧೦ ಕಿ.ಮೀ. ದೂರದವರೆಗೆ ಡಿಪಿಆರ್ ಮಾಡಲಾಗಿದ್ದು, ಉಳಿದಿರುವ ೫ ಕಿ.ಮೀ.ಗೆ ಇನ್ನಷ್ಟೇ ಡಿಪಿಆರ್ ತಯಾರಾಗಬೇಕಿದೆ.
ಪವರ್ ಪ್ಲಾಂಟ್ ನಿರ್ಮಾಣ: ಇದರೊಂದಿಗೆ ಮಲ್ಲಳ್ಳಿಯಲ್ಲಿ ಪವರ್ ಪ್ಲಾಂಟ್ ಸ್ಥಾಪನೆಗೂ ಸಂಸ್ಥೆ ಕ್ರಮವಹಿಸಿದ್ದು, ಈ ಪವರ್ ಪ್ಲಾಂಟ್‌ನಿAದ ಲಭಿಸುವ ವಿದ್ಯುತ್ ಮೂಲಕ ಕೇಬಲ್ ಕಾರ್ ಚಲಿಸಲಿದೆ. ಕೇಬಲ್ ಕಾರ್‌ಗೆ ೧೫ ರಿಂದ ೨೦ ಮೆಗಾವ್ಯಾಟ್ ವಿದ್ಯುತ್‌ನ ಅವಶ್ಯಕತೆಯಿದ್ದು, ಈ ಅವಶ್ಯಕತೆಯನ್ನು ಸ್ಥಳೀಯವಾಗಿಯೇ ಭರಿಸಿಕೊಳ್ಳಲು ಸಂಸ್ಥೆ ಚಿಂತನೆ ಹರಿಸಿದೆ.
ಮಲ್ಲಳ್ಳಿಯಿಂದ ಸುಬ್ರಹ್ಮಣ್ಯದವರೆಗೆ ಪಿಲ್ಲರ್‌ಗಳನ್ನು ನಿರ್ಮಿಸಿ ರೋಪ್‌ಗಳನ್ನು ಅಳವಡಿಸಲಾಗುವುದು. ಎರಡೂ ಕಡೆಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಕೇಂದ್ರ ಸ್ಥಾಪಿಸುವ ಪ್ರಸ್ತಾಪವನ್ನು ಯೋಜನೆ ಒಳಗೊಂಡಿದೆ. ಉದ್ದೇಶಿತ ಯೋಜನೆ ಅನುಷ್ಠಾನಗೊಂಡರೆ ಕೇಬಲ್ ಕಾರ್ ಮೂಲಕ ಕೇವಲ ಅರ್ಧ ಗಂಟೆಯಲ್ಲಿ ಸುಬ್ರಹ್ಮಣ್ಯಕ್ಕೆ ತೆರಳಬಹುದಾಗಿದೆ.
ಸರ್ಕಾರದ ಉದ್ಯೋಗ ಮಿತ್ರ ಯೋಜನೆಯಡಿ ನೋಂದಾಯಿಸಿಕೊAಡಿರುವ ಸಂಸ್ಥೆಯು ಸ್ವಂತ ಜಾಗವನ್ನೂ ಹೊಂದಿದೆ. ಅರಣ್ಯ ಇಲಾಖೆಯಿಂದ ನಿರಾಕ್ಷೇಪಣೆ ಪಡೆದಿದೆ. ಪರಿಸರ ಪೂರಕ ಪ್ರವಾಸೋದ್ಯಮ ಅನುಷ್ಠಾನ ಸಂಬAಧ ಕೇಂದ್ರದಿAದಲೂ ಒಪ್ಪಿಗೆ ಪಡೆದುಕೊಂಡಿದೆ. ಯೋಜನೆ ಅನುಷ್ಠಾನದಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮೆರುಗು ಬರುವುದರ ಜೊತೆಗೆ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ೨ ವರ್ಷಗಳಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ ಎಂದು ಸಂಸ್ಥೆಯ ಅಧಿಕಾರಿ ವಿಘ್ನೇಶ್ ಅವರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಹಲವು ದಶಕಗಳ ನಿರೀಕ್ಷೆಯಾಗಿರುವ ಕೇಬಲ್ ಕಾರ್ ಯೋಜನೆಗೆ ಇದೀಗ ಮತ್ತೆ ಚಾಲನೆ ದೊರೆತಿದ್ದು, ಯಾವುದೇ ವಿಘ್ನಗಳು ಎದುರಾಗದೇ ಇದ್ದರೆ ಮುಂದಿನ ೨ ವರ್ಷಗಳಲ್ಲಿ, ಕೊಡಗಿನಲ್ಲಿ ಪ್ರಥಮ ಕೇಬಲ್ ಕಾರ್ ರೋಪ್ ವೇ ಮೂಲಕ ಸಾಗಲಿದೆ.
ಮಲ್ಲಳ್ಳಿಯಿಂದ ಸುಬ್ರಹ್ಮಣ್ಯಕ್ಕೆ ಕೇವಲ ಅರ್ಧ ಗಂಟೆಯಲ್ಲಿ ತೆರಳಬಹುದಾಗಿದ್ದು, ಪ್ರಾಕೃತಿಕ ಸೌಂದರ್ಯವನ್ನೂ ಸವಿಯಬಹುದಾಗಿದೆ. ಇದರೊಂದಿಗೆ ಪ್ರವಾಸೋದ್ಯಮವೂ ಗರಿಗೆದರಲಿದೆ. ಕುಗ್ರಾಮವೆಂದು ಕರೆಯಲ್ಪಡುವ ಮಲ್ಲಳ್ಳಿ, ಪ್ರವಾಸೋದ್ಯಮದ ಭೂಪಟದಲ್ಲಿ ಪ್ರಖ್ಯಾತಿ ಗಳಿಸಲಿದೆ ಎಂಬ ನಿರೀಕ್ಷೆ ಸೃಷ್ಟಿಸಿದೆ. -ವಿಜಯ್ ಹಾನಗಲ್