ಸುಂಟಿಕೊಪ್ಪ, ಫೆ. ೧: ಕೊಡಗರಹಳ್ಳಿ, ಕಂಬಿಬಾಣೆ ಹಾಗೂ ಚಿಕ್ಲಿಹೊಳೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಅಪಾಯದಂಚಿನಲ್ಲಿದ್ದ ಖಾಸಗಿ ತೋಟವೊಂದರ ಭಾರೀ ಗಾತ್ರದ ಮರವೊಂದನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.
ಅರಣ್ಯ ಇಲಾಖೆಯ ಕುಶಾಲನಗರ ವಲಯಕ್ಕೆ ಸೇರಿದ ಸಹಾಯಕ ವಲಯಾರಣ್ಯಾಧಿಕಾರಿ ಕೆ.ಎಂ.ದೇವಯ್ಯ ಮತ್ತು ಸಿಬ್ಬಂದಿ ಭಾರೀ ಗಾತ್ರದ ಹೊನ್ನೆ ಮರವನ್ನು ಆನೆಕಾಡು ಮರ ಸಂಗ್ರಹಾಲಯಕ್ಕೆ ಸಾಗಿಸಿದರು.