ಮಡಿಕೇರಿ, ಫೆ. ೧: ದೇಶದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಪೂರಕ ಬಜೆಟ್ ಅನ್ನು ಕೇಂದ್ರ ಸರಕಾರ ಮಂಡಿಸಿದೆ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಹಿಂದೆAದು ಕಾಣದ ರೀತಿಯ ಸಮಗ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ್ದಾರೆ. ಎಲ್ಲಾ ವಲಯವನ್ನು ಗಮನದಲ್ಲಿಟ್ಟುಕೊಂಡು ಆಯವ್ಯಯ ತಯಾರಿಸಲಾಗಿದೆ. ದೊಡ್ಡ ಗಾತ್ರದ ಬಜೆಟ್‌ವೊಂದಿಗೆ ಜಿಡಿಪಿ ಹೆಚ್ಚಾಗಲು ಇದು ಪೂರಕವಾಗಿದ್ದು, ಜನಪರ ಬಜೆಟ್ ಎಂದು ವ್ಯಾಖ್ಯಾನಿಸಿದ್ದಾರೆ. ರೈತ ವಲಯಕ್ಕೆ ೧ ಲಕ್ಷದ ೭೧ ಸಾವಿರ ಕೋಟಿ ನೀಡಲಾಗಿದೆ. ರೂ. ೩ ರಿಂದ ೫ ಲಕ್ಷ ಹಣವನ್ನು ಕಿಸಾನ್ ಕ್ರೆಡಿಟ್ ಮೂಲಕ ರೈತರಿಗೆ ನೀಡಲು ಉದ್ದೇಶಿಸಿರುವುದು ಒಳ್ಳೆಯ ವಿಚಾರವಾಗಿದೆ. ಆತಿಥ್ಯ ಕೇಂದ್ರ ಗಳಿಗೆ ರೂ. ೩ ರಿಂದ ೫ ಕೋಟಿ ಸಾಲ ನೀಡಿ ಉದ್ಯಮದ ಬಲವರ್ಧನೆಗೆ ಮುಂದಾಗಿರುವುದು ಕೊಡಗಿನ ಜನ ರಿಗೂ ಉಪಯುಕ್ತವಾಗುತ್ತದೆ. ಪರಿಶಿಷ್ಟ ವರ್ಗದವರು ಆಸ್ತಿ ಖರೀದಿ ಸಲು ರೂ. ೨ ಕೋಟಿ ತನಕ ಸಾಲ ಯೋಜನೆ ರೂಪಿ ಸಲಾಗಿದೆ. ಮುದ್ರ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ರೂ. ೩೦ ಸಾವಿರ ಸಾಲ ನೀಡಲಾಗುತ್ತದೆ. ಪಂಚಾ ಯತ್ ರಾಜ್‌ಗೆ ರೂ. ೨ ಲಕ್ಷ ಕೋಟಿ ಹಣ ನೀಡಿ ರುವುದು ಉತ್ತಮ ಬೆಳವಣಿಗೆಯಾಗಿದೆ. ೧೦೦ ಐಐಟಿ ಕಾಲೇಜು ಸ್ಥಾಪನೆ, ೧೦ ಸಾವಿರ ವೈದ್ಯಕೀಯ ಸೀಟ್‌ಗಳ ಹೆಚ್ಚಳದಿಂದ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದಂತಾಗಿದೆ. ಕ್ಯಾನ್ಸರ್ ಔಷಧಿಗಳಿಗೆ ವಿಧಿಸಿದ್ದ ಆಮದು ತೆರಿಗೆ ಕಡಿಮೆ ಮಾಡಿರುವುದು, ರೂ. ೧೨ ಲಕ್ಷದೊಳಗಿನ ಆದಾಯ ಇರುವವರಿಗೆ ತೆರಿಗೆ ವಿನಾ ಯಿತಿ ಸೇರಿದಂತೆ ಬಜೆಟ್‌ನ ಹಲವು ಅಂಶಗಳು ಜನರ ಬದುಕಿನ ಸುಧಾರಣೆ ಪೂರಕವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಜನಪರ ಮತ್ತು ಅಭಿವೃದ್ದಿ ಪರ ಬಜೆಟ್

ವಿಕಸಿತ ಭಾರತದ ಕಲ್ಪನೆಗೆ ಪೂರಕವಾಗಿ, ಮುಂದಿನ ೫ ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಕೃಷಿ, ಕೈಗಾರಿಕೆ, ಯುವ ಜನತೆ, ಅನ್ನದಾತರು ಮತ್ತು ಮಹಿಳೆ ಯರನ್ನು ಉದ್ದೇಶವಾಗಿಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದ್ದು, ಸರ್ವತೋ ಮುಖ ಅಭಿವೃದ್ಧಿ ಮತ್ತು ಮಧ್ಯಮ ವರ್ಗದ ಜನರ ಪರವಾಗಿನ ಬಜೆಟ್ ಇದಾಗಿದೆ.

ಅಗತ್ಯ ವಸ್ತುಗಳ ಬೆಲೆ ಇಳಿಕೆ, ಆದಾಯ ತೆರಿಗೆಯಲ್ಲಿ ರಿಯಾಯಿತಿ, ಸರ್ಕಾರಿ ಶಾಲೆಗಳಿಗೆ ಬ್ರಾಡ್ ಬಾಂಡ್ ಸೌಲಭ್ಯ, ಕ್ಯಾನ್ಸರ್ ಸಂಬAಧಿತ ಖಾಯಿಲೆಗಳ ಔಷಧಿಗಳ ಆಮದು ಮೇಲಿನ ಅಬಕಾರಿ ಸುಂಕದಿAದ ರಿಯಾಯಿತಿ ಮತ್ತು ವಿಶೇಷವಾಗಿ ಹೋಮ್ ಸ್ಟೇ ಗಳ ನಿರ್ಮಾಣಕ್ಕೆ ಮುದ್ರಾ ಯೋಜನೆಯ ಮೂಲಕ ಸಾಲ ಸೌಲಭ್ಯ ಒದಗಿಸುವುದು ಮಲೆನಾಡು ಭಾಗವಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.

- ಎಂ.ಪಿ. ಸುಜಾ ಕುಶಾಲಪ್ಪ, ಶಾಸಕರು, ಕರ್ನಾಟಕ ವಿಧಾನ ಪರಿಷತ್ತು