ಸಿದ್ದಾಪುರ, ಫೆ. ೧: ಅರಣ್ಯದಲ್ಲಿ ವನ್ಯಪ್ರಾಣಿ ಬೇಟೆಗೆ ಹೊಂಚು ಹಾಕುತ್ತಿದ್ದವರನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಮುಂಜಾನೆ ೩.೩೦ರ ವೇಳೆಗೆ ಹುಣಸೂರು-ವೀರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಹುಂಡೈ ಅಸೆಂಟ್ ಕಾರು (ಕೆ.ಎ.೫೧ ಎಂ ೦೭೧೨) ಅನುಮಾನಾಸ್ಪದವಾಗಿ ಅತ್ತಿಂದಿತ್ತ ಸಂಚರಿಸುತ್ತ್ತಿದ್ದುದನ್ನು ಗಮನಿಸಿದ ಗಸ್ತಿನಲ್ಲಿದ್ದ ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರನ್ನು ಹಿಂಬಾಲಿಸಿ ಜಡೆ ಆಲದಮರ ಗೇಟ್ ಸಮೀಪ ಅಡ್ಡಗಟ್ಟಿದ್ದಾರೆ. ಕಾರಿನಲ್ಲಿ ಐವರು ಎರಡು ಒಂಟಿ ನಳಿಕೆ ಬಂದೂಕಿ ನೊಂದಿಗೆ ಕುಳಿತಿರುವದು ಗೋಚರಿಸಿದೆ. ಅವರುಗಳನ್ನು ವಿಚಾರಿಸಿ ದಾಗ ಈ ಹಿಂದೆ ಜ.೩೦ ರಂದು ಕಡವೆ ಬೇಟೆಯಾಡಿದ್ದವರೆಂದು ಗೊತ್ತಾಗಿದೆ. ಮತ್ತೆ ಇಂದು ಕೂಡ ಬೇಟೆಯಾಡಲು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕಿನ ಕುಟ್ಟಂದಿ ಗ್ರಾಮದ ಸಿ.ಬಿ.ಮೋಟಯ್ಯ, ಕೊಂಗಣ ಗ್ರಾಮದ ಪಿ.ಎಂ.ಸAದೀಪ್, ಬಿ.ಎನ್. ನಾಚಪ್ಪ, ಕೆ.ಎಂ. ಸತೀಶ್ ಕೆ.ಎಸ್. ಚಂದನ್ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಳಿ ಇದ್ದ ಎರಡು ಒಂಟಿ ನಳಿಕೆ ಬಂದೂಕುಗಳು, ತುಂಬಿದ ೧೧ ಕಾಡತೂಸುಗಳು, ಎರಡು ಮೊಬೈಲ್, ಒಂದು ಚೂರಿ, ಒಂದು ಕತ್ತಿ, ಒಂದು ಟಾರ್ಚ್, ಒಂದು ಅರ, ಮೂರು ಪ್ಲಾಸ್ಟಿಕ್ ಚೀಲಗಳು, ಒಂದು ಬ್ಯಾಗ್, ಒಂದು ಟಾರ್ಪಲ್ ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ. ಸೀಮಾ ಅವರ ಮಾರ್ಗದರ್ಶನ ದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಎನ್. ಲಕ್ಷಿö್ಮÃಕಾಂತ್, ವಲಯ ಅರಣ್ಯಾಧಿಕಾರಿ ಕೆ.ಇ. ಸುಬ್ರಮಣ್ಯ ನೇತೃತ್ವದಲ್ಲಿ ಹುಣಸೂರು ವನ್ಯಜೀವಿ ವಲಯ ಕಚುವಿನಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಹೆಚ್.ಎಂ ಪ್ರಮೋದ್, ಎಸ್.ಟಿ.ಪಿ.ಎಫ್. ಉಪ ವಲಯ ಅರಣ್ಯಾಧಿಕಾರಿ ಚಂದನ್, ಗಸ್ತು ಅರಣ್ಯ ಪಾಲಕರು, ಎಪಿಸಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
-ಎಸ್.ಎA. ಮುಬಾರಕ್