ಶ್ರೀಮಂಗಲ, ಜ. ೨೮: ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂರು ಸ್ಥಾನಗಳಿಗೆ ನಡೆದ ಮತದಾನದ ಎಣಿಕೆ ಹಾಗೂ ಫಲಿತಾಂಶ ಉಚ್ಚ ನ್ಯಾಯಾಲಯದ ಆದೇಶದ ಮೇರೆ ಮಂಗಳವಾರ ನಡೆಯಿತು. ಮಹಿಳೆಯರ ಎರಡು ಸ್ಥಾನಕ್ಕೆ ಎ.ಎಂ. ವಸಂತಿ (ಜಮುನಾ)ಹಾಗೂ ಎ.ಟಿ. ಬೊಳ್ಳಮ್ಮ ಆಯ್ಕೆಯಾಗಿದ್ದಾರೆ. ಬೀರುಗ ಗ್ರಾಮದ ಸಾಮಾನ್ಯ ಸ್ಥಾನಕ್ಕೆ ಅಯ್ಯಮಾಡ ಉದಯ ಅವರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕರುಣ್ ಕಾರ್ಯಪ್ಪ ಮಾಹಿತಿ ನೀಡಿದ್ದಾರೆ.