ಸೋಮವಾರಪೇಟೆ, ಜ. ೨೮: ಇಲ್ಲಿನ ಜಯವೀರಮಾತೆ ದೇವಾಲಯದ ವಾರ್ಷಿಕೋತ್ಸವ ಚರ್ಚ್ನ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಂಗಳೂರು, ಮೈಸೂರು ಧರ್ಮಕ್ಷೇತ್ರದ ವಿಶ್ರಾಂತ ಮಹಾಧರ್ಮಾಧ್ಯಕ್ಷರಾದ ಡಾ.ಬರ್ನಾಡ್ ಮೊರಾಸ್ ದಿವ್ಯ ಬಲಿಪೂಜೆ ನೆರವೇರಿಸಿದರು. ಏಸು ಭಕ್ತರಲ್ಲಿ ಪ್ರೀತಿ, ಶಾಂತಿ ನೆಲಸಲಿ ಎಂದು ಆಶೀರ್ವದಿಸಿದರು. ನಂತರ ಆಡಂಬರ ಗಾಯನ ನಡೆಯಿತು. ನೂರಾರು ಮಂದಿ ಭಕ್ತರು ಸಾಮೂಹಿಕವಾಗಿ ತ್ರೆöÊಯೇಕ ದೇವರನ್ನು ಸ್ತುತಿಸಿದರು. ಬೆಳಗುವ ದೀಪಗಳೊಂದಿಗೆ ಶೃಂಗಾರಭರಿತ ತೇರಿನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಂತರ ಚರ್ಚ್ನಲ್ಲಿ ಅನ್ನದಾನ ನಡೆಯಿತು. ಮಡಿಕೇರಿ ವಲಯ ಧರ್ಮಗುರು ಜಾರ್ಜ್ ದೀಪಕ್, ಸೋಮವಾರಪೇಟೆ ಧರ್ಮಗುರು ಅವಿನಾಶ್ ಸೇರಿದಂತೆ ಇತರ ಚರ್ಚ್ಗಳ ಧರ್ಮಗುರುಗಳು ಇದ್ದರು.