ಸ್ವತಂತ್ರ ಭಾರತದ ಮೇರು ರೂವಾರಿ ರಾಷ್ಟçಪಿತ ಮಹಾತ್ಮ ಗಾಂಧಿಯವರ ಪುಣ್ಯ ತಿಥಿಯ ದಿನವಾದ ಜನವರಿ ೩೦ ರಂದು ಹುತಾತ್ಮರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.
ಜಗತ್ತಿನ ಶಾಂತಿದೂತ ಎಂದೇ ಬಿಂಬಿತರಾಗಿರುವ ಮಹಾತ್ಮ ಗಾಂಧಿಯವರು ೧೯೪೮ ರ ಜನವರಿ ೩೦ ರಂದು ಹಂತಕನ ಗುಂಡಿನ ದಾಳಿಗೆ ಬಲಿಯಾದ ನಂತರ ಪ್ರತಿ ವರ್ಷ ಅವರ ಸ್ಮರಣೆಗಾಗಿ ಹುತಾತ್ಮರ ದಿನಾರಣೆಯನ್ನು ಆಚರಿಸಿ ಬಾಪು ಅವರಿಗೆ ಗೌರವ ಸಲ್ಲಿಸಲಾಗುತ್ತದೆ.
ಮಹಾತ್ಮ ಗಾಂಧಿಯವರ ಪುಣ್ಯ ಸ್ಮರಣೆಯನ್ನು ದೇಶದ ಎಲ್ಲಾ ಭಾಗಗಳಲ್ಲಿ ಏಕ ಪ್ರಕಾರವಾಗಿ ಆಚರಿಸಿದರೆ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ.
ಕೊಡಗು ಜಿಲ್ಲಾಡಳಿತ, ಸರ್ವೋದಯ ಸಮಿತಿ ಮತ್ತು ಇತರ ಸಂಘ-ಸAಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಸಂಸ್ಕರಿಸಿ ಇಡಲಾದ ಶ್ರೀಗಂಧ ಹಾಗೂ ಬೆಳ್ಳಿಯಿಂದ ರಚಿಸಲಾದ ಪೆಟ್ಟಿಗೆಯಲ್ಲಿ ತುಂಬಿರುವ ಮಹಾತ್ಮ ಗಾಂಧಿಯವರ ಚಿತಾಭಸ್ಮವನ್ನು ಸರ್ಕಾರಿ ಗೌರವಗಳೊಂದಿಗೆ ಪೊಲೀಸ್ ಬ್ಯಾಂಡ್‌ನೊAದಿಗೆ ಮಡಿಕೇರಿ ನಗರದಲ್ಲಿ ಮೌನ ಮೆರವಣಿಗೆ ಮೂಲಕ ಸಾಗಿ ಗಾಂಧಿ ಮಂಟಪದಲ್ಲಿ ಸೇರಿ ಪೊಲೀಸ್ ಪಡೆಯಿಂದ ಕುಶಲತೋಪು ಸಿಡಿಸಿ ಗೌರವ ವಂದನೆ ಸಲ್ಲಿಸಲಾಗುತ್ತದೆ.
ನಂತರ ಗಾಂಧಿ ಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
೧೧ ಗಂಟೆಗೆ ಸರಿಯಾಗಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ನಂತರ ಮಹಾತ್ಮರ ಚಿತಾ ಭಸ್ಮವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಖಜಾನೆಯಲ್ಲಿ ಇಡಲಾಗುತ್ತದೆ.
ಮಡಿಕೇರಿಯಲ್ಲಿ ಸೆಂಟ್ರಲ್ ವರ್ಕ್ ಶಾಪ್ ಇದ್ದಾಗ ೧೧ ಗಂಟೆಗೆ ಸರಿಯಾಗಿ ಎರಡು ನಿಮಿಷಗಳ ಕಾಲ ಸೈರನ್ ಮೊಳಗಿಸಲಾಗುತ್ತಿತ್ತು.
ಆಗ ಇಡೀ ಮಡಿಕೇರಿ ನಗರವೇ ನಿಶ್ಯಬ್ದವಾಗಿ ಮಹಾತ್ಮರಿಗೆ ಗೌರವ ಸಲ್ಲಿಸುತ್ತಿತ್ತು. ಶಾಲಾ-ಕಾಲೇಜುಗಳು, ಕಚೇರಿಗಳು, ರಸ್ತೆಯಲ್ಲಿ ವಾಹನಗಳು ಎಲ್ಲವೂ ಸ್ತಬ್ದವಾಗಿರುತ್ತಿದ್ದವು)
ದೇಶದ ಯಾವುದೇ ಭಾಗದಲ್ಲಿ ನಡೆಯದಿರುವ ಅಪರೂಪದ ಕಾರ್ಯಕ್ರಮ ಮಡಿಕೇರಿ ನಗರದಲ್ಲಿ ನಡೆಯುತ್ತಿದ್ದು ಇದಕ್ಕೆ ಸುದೀರ್ಘ ವಾದ ಇತಿಹಾಸ ಇದೆ. ಆಗಿನ ಹಿರಿಯ ಸ್ವಾತಂತ್ರö್ಯ ಹೋರಾಟಗಾರರಾದ ಕೊಳ್ಳಿಮಾಡ ಕರುಂಬಯ್ಯ, ಪಂದ್ಯAಡ ಬೆಳ್ಯಪ್ಪ, ಚೆಪ್ಪುಡಿರ ಪೂಣಚ್ಚ ಸೇರಿದಂತೆ ಪ್ರಮುಖರು ಮಹಾತ್ಮ ಗಾಂಧಿ ಯವರ ಚಿತಾ ಭಸ್ಮವನ್ನು ಕೊಡಗಿಗೆ ತರುತ್ತಾರೆ. ಅದನ್ನು ಎರಡು ಶ್ರೀಗಂಧ ಮತ್ತು ಬೆಳ್ಳಿಯಿಂದ ತಯಾರಿಸಿದ ಸಣ್ಣ ಪೆಟ್ಟಿಗೆಗಳಲ್ಲಿ ಶೇಖರಿಸಿ ಅಂದಿನ ಕೂರ್ಗ್ ಸ್ಟೇಟ್ ಖಜಾನೆಯಲ್ಲಿ ಇರಿಸಲಾಗುತ್ತದೆ.
ಕೂರ್ಗ್ ಸರ್ಕಾರದ ಚೀಫ್ ಕಮಿಷನರ್ ಆಗಿದ್ದ ಐ.ಸಿ.ಎಸ್ ಅಧಿಕಾರಿ ಟಿ.ಜಿ.ಎನ್. ಅಯ್ಯರ್ ಅವರು ಮಹಾತ್ಮ ಗಾಂಧಿಯವರ ನೆನಪುಗಳನ್ನು ಶಾಶ್ವತವಾಗಿ ಇಡುವ ಪ್ರಸ್ತಾವನೆಯನ್ನು ಕೂರ್ಗ್ ಸರ್ಕಾರದ ಮುಂದಿಡುತ್ತಾರೆ.
ಅಂದಿನ ಕೂರ್ಗ್ ಸ್ಟೇಟಿನ ಮುಖ್ಯ ಮಂತ್ರಿಗಳಾಗಿದ್ದ ಚೆಪ್ಪುಡಿರ ಪೂಣಚ್ಚ, ಗೃಹಮಂತ್ರಿ ಎಸ್. ಮಲ್ಲಪ್ಪ ಸೇರಿದಂತೆ ಎಲ್ಲಾ ಶಾಸಕರ ಸಹಮತದೊಂದಿಗೆ ಕೊಡಗಿನ ಗಾಂಧಿ ಖ್ಯಾತಿಯ ಪಂದ್ಯAಡ ಬೆಳ್ಯಪ್ಪ ಅವರು ೧೯೩೪ ರಲ್ಲಿ ಮಹಾತ್ಮ ಗಾಂಧಿಯವರನ್ನು ಕರೆಸಿ ಮಡಿಕೇರಿಯಲ್ಲಿ ಸಾರ್ವಜನಿಕ ಭಾಷಣ ಮಾಡಿದ ಗಾಂಧಿ ಮೈದಾನದಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿ ಸುತ್ತಾರೆ.
ಸುಮಾರು ರೂ. ೩೦ ಸಾವಿರ ವೆಚ್ಚದಲ್ಲಿ ಸುಂದರವಾದ ಗಾಂಧಿ ಮಂಟಪ ನಿರ್ಮಾಣ ಆಗುತ್ತದೆ.
ಕೂರ್ಗ್ ಚೀಫ್ ಕಮಿಷನರ್ ಟಿ.ಜಿ.ಎನ್ ಅಯ್ಯರ್ ಕೋರಿಕೆ ಮೇರೆಗೆ ೧೯೫೪ ರ ಏಪ್ರಿಲ್ ೨ ರಂದು ಭಾರತ ಸರ್ಕಾರದ ಗೃಹ ಇಲಾಖೆಯ ಸಚಿವ ಬಲವಂತ್ ನಾಗೇಶ್ ಧಾತರ್ ಅವರು ಆಗಮಿಸಿ ಮಹಾತ್ಮರ ಪವಿತ್ರ ಚಿತಾಭಸ್ಮವನ್ನು ಕೋಟೆಯಲ್ಲಿರುವ ಸರ್ಕಾರಿ ಖಜಾನೆಯಿಂದ ಪೊಲೀಸ್ ಬ್ಯಾಂಡ್, ಸರ್ಕಾರದ ಸಚಿವರು, ಅಧಿಕಾರಿಗಳು ಮತ್ತು ಸುಮಾರು ಮೂರು ಸಾವಿರಕ್ಕೂ ಅಧಿಕ ಸಾರ್ವಜನಿಕರೊಂದಿಗೆ ಮಡಿಕೇರಿ ನಗರದಲ್ಲಿ ಮೆರವಣಿಗೆ ಮೂಲಕ ಸಾಗಿ ಗಾಂಧಿ ಮಂಟಪಕ್ಕೆ ತೆರಳಿ ಅಲ್ಲಿ ಸರ್ವ ಧರ್ಮ ಪ್ರಾರ್ಥನೆ ನಡೆಸಲಾಗುತ್ತದೆ.
ನಂತರ ಮಧ್ಯಭಾಗದಲ್ಲಿ ಶಾಶ್ವತವಾಗಿ ಇಟ್ಟು ಭೂಮಿಯಲ್ಲಿ ಲೀನಗೊಳಿಸುತ್ತಾರೆ. ಕಾರ್ಯಕ್ರಮದ ತರುವಾಯ ಎರಡನೇ ಪೆಟ್ಟಿಗೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮೆರವಣಿಗೆ ಮೂಲಕ ಖಜಾನೆಗೆ ತಂದು ಭದ್ರತಾ ಕೊಠಡಿಯಲ್ಲಿ ಇಡಲಾಗುತ್ತದೆ.ಅಂದಿನಿAದ ಅಂದರೆ ಪ್ರತಿವರ್ಷ ಜನವರಿ ೩೦ ರಂದು ಮಹಾತ್ಮರ ಚಿತಾಭಸ್ಮವನ್ನು ಜಿಲ್ಲಾಡಳಿತ, ಸರ್ವೋದಯ ಸಮಿತಿ ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಮೆರವಣಿಗೆ ಮಾಡುವ ಮೂಲಕ ಹುತಾತ್ಮರ ದಿನ ಅಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ಕೆಲವು ವರ್ಷಗಳ ಹಿಂದೆ ಸರ್ವೋದಯ ಸಮಿತಿಯವರು ರಾಜ್‌ಘಾಟ್ ಮಾದರಿಯಲ್ಲಿ ಸ್ಮಾರಕ ನಿರ್ಮಿಸಿ ಬಾಪುರವರ ಚಿತಾಭಸ್ಮವನ್ನು ಶಾಶ್ವತವಾಗಿ ಇರಿಸಲು ಯೋಜನೆ ಸಿದ್ಧಪಡಿಸುತ್ತಾರೆ.
ಕಳೆದ ವರ್ಷ ಗಾಂಧಿ ಮಂಟಪವನ್ನು ನೆಲಸಮ ಮಾಡಿ ಹೊಸ ಕಟ್ಟಡವನ್ನು ರೂಪಾಯಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇನ್ನೂ ರೂ. ೬೦ ಲಕ್ಷ ವೆಚ್ಚದ ಕಾಮಗಾರಿ ನಡೆಯಬೇಕಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಎರಡರಿಂದ ಮೂರು ತಿಂಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ಮುಗಿಯಲಿದೆ.
ಹಾಗಾಗಿ ಈ ಜನವರಿ ೩೦ ರಂದು ನಡೆಯಲಿರುವ ಗಾಂಧಿ ಚಿತಾಭಸ್ಮದ ಮೆರವಣಿಗೆ ಕೊನೆಯ ಕಾರ್ಯಕ್ರಮ ಆಗಲಿದೆ.
ಸುಮಾರು ೭೦ ವರ್ಷಗಳಿಂದ ನಡೆದುಕೊಂಡು ಬಂದAತಹ ಬಾಪುವಿನೊಂದಿಗಿನ ಭಾವನಾತ್ಮಕ ಬಾಂಧವ್ಯಗಳಿಗೆ ತೆರೆ ಬೀಳಲಿದೆ.
ಇಂತಹ ಒಂದು ಭಾವನಾತ್ಮಕ, ಐತಿಹಾಸಿಕ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಬೇಕು ಎಂಬ ಚಿಂತನೆಯಿAದ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೆಚ್ಚಿನ ಸಾರ್ವಜನಿಕರು ಜನವರಿ ೩೦ ರಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೋರಿದ್ದಾರೆ.
ಸರ್ವೋದಯ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ ಮತ್ತು ಸಮಿತಿ ಸದಸ್ಯರು ಈ ಕೊನೆಯ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಕೊಡಗಿನ ನಾಗರಿಕರಿಗೆ ಜಗತ್ತಿನ ಎಲ್ಲಿಯೂ ನಡೆಯದ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಪುರವರಿಗೆ ವಿಭಿನ್ನವಾಗಿ ಗೌರವಿಸುವ ಅವಕಾಶ ಒದಗಿದೆ. ಎಲ್ಲಾ ಸಾರ್ವಜನಿಕರು ಸೇರಿ ಮಹಾತ್ಮರನ್ನು ಸ್ಮರಿಸುವ ಭಾಗ್ಯ ನಮ್ಮ ಮುಂದಿದೆ. ಬನ್ನಿ ಎಲ್ಲರೂ ಭಾಗವಹಿಸೋಣ.
- ತೆನ್ನಿರ ಮೈನಾ, ಸರ್ವೋದಯ ಸಮಿತಿ, ಮಡಿಕೇರಿ.