ಸೋಮವಾರಪೇಟೆ, ಜ.೨೮: ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ರಥ ಸಪ್ತಮಿ ಆಚರಣೆ ಅಂಗವಾಗಿ ಉಚಿತ ಸೂರ್ಯ ನಮಸ್ಕಾರ ಅಭ್ಯಾಸ ಶಿಬಿರ ತಾ. ೨೯ರಿಂದ (ಇಂದಿನಿAದ) ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.
ಫೆ. ೪ರಂದು ಬೆಳಿಗ್ಗೆ ೫.೪೫ ರಿಂದ ೭.೪೫ ರವರೆಗೆ ದೊಡ್ಡಮಳ್ತೆ ಹೊನ್ನಮ್ಮನ ಕೆರೆ ದಡದಲ್ಲಿ ರಥ ಸಪ್ತಮಿ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ೧೦೮ ಸೂರ್ಯ ನಮಸ್ಕಾರ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಪಟ್ಟಣದಲ್ಲಿ ಉಚಿತ ತರಬೇತಿ ನೀಡುತ್ತಿದ್ದು, ಆಸಕ್ತರು ಮೊ:೯೯೪೫೯೮೭೭೧೭ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು. ಫೆ.೪ರಂದು ರಥ ಸಪ್ತಮಿ ಅಂಗವಾಗಿ ಓಂಕಾರ ಮತ್ತು ಪ್ರಾರ್ಥನೆ, ಸೂರ್ಯದೇವನಿಗೆ ೧೦೮ ನಮಸ್ಕಾರ, ನಾಡಿ ಶೋಧನ ಪ್ರಾಣಾಯಾಮ ಮತ್ತು ಧ್ಯಾನ, ಲಲಿತ ಸಹಸ್ರನಾಮ, ಹೊನ್ನಮ್ಮ ದೇವಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ರಾಗಿಣಿ ಮಾಹಿತಿ ನೀಡಿದ್ದಾರೆ.