ಮಡಿಕೇರಿ, ಜ. ೨೮: ಆಡುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
೭ನೇ ಹೊಸಕೋಟೆ ಗ್ರಾಮದ ಮಂಜುನಾಥ್, ಪ್ರತಾಪ್, ರಮೇಶ್ ಹಾಗೂ ಲೋಹಿತ್ ಬಂಧಿತ ಆರೋಪಿಗಳು.
ಸುಂಟಿಕೊಪ್ಪ ನಿವಾಸಿ, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಅವರ ತೋಟದಲ್ಲಿ ಸಾಕಿದ್ದ ೧೧ ಆಡುಗಳು ಕಳೆದ ಒಂದು ವಾರದ ಹಿಂದೆ ಕಳವಾಗಿದ್ದವು. ಈ ಕುರಿತು ಠಾಣೆಗೆ ಲತೀಫ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಲತೀಫ್ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ಆಡು, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಬಂಧನಕ್ಕೆ ಒಳಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.