ಮುಳ್ಳೂರು, ಜ. ೨೭: ಸಮೀಪದ ಶನಿವಾರಸಂತೆ ಗ್ರಾ.ಪಂ.ಯ ೨೦೨೪-೨೫ನೇ ಸಾಲಿನ ಗ್ರಾಮಸಭೆ ಗುರುವಾರ ಗ್ರಾ.ಪಂ.ಕಚೇರಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಗೀತ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಜಲಜೀವನ್ ಯೋಜನೆ ವತಿಯಿಂದ ಕುಡಿಯುವ ನೀರು ಸರಬರಾಜಾಗುವ ಪೈಪ್‌ಲೈನ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಅವೈಜ್ಞಾನಿಕವಾಗಿದೆ ಮತ್ತು ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಗ್ರಾ.ಪಂ.ಯಿAದ ನಿರ್ಮಿಸಿದ್ದ ಕಾಂಕ್ರಿಟ್ ರಸ್ತೆ ಮಧ್ಯದಲ್ಲಿ ಜೆಜಿಎಂ ವತಿಯಿಂದ ಪೈಪ್‌ಲೈನ್ ಕಾಮಗಾರಿ ಮಾಡಿರುವುದ್ದರಿಂದ ರಸ್ತೆ ಹಾಳಾಗಿದೆ ಕಾಮಗಾರಿ ಸಂದರ್ಭ ಸಂಬAಧ ಪಟ್ಟ ಇಂಜಿನಿಯರ್ ಅಧಿಕಾರಿಗಳು ಸ್ಥಳಕ್ಕೆ ಹಾಜರಾಗಿ ಕಾಮಗಾರಿ ಪರಿಶೀಲನೆ ಯಾಕೆ ಮಾಡುತ್ತಿಲ್ಲ ಎಂದು ಗ್ರಾ.ಪಂ.ಉಪಾಧ್ಯಕ್ಷ ಸರ್ದಾರ್ ಆಹಮ್ಮದ್, ಸದಸ್ಯ ಎಸ್.ಎನ್.ರಘು, ಶರತ್‌ಶೇಖರ್ ಅವರುಗಳು ಮಾಹಿತಿ ನೀಡುತ್ತಿದ್ದ ಸಂದರ್ಭ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಭಿಯಂತರ ತೀರ್ಥಕುಮಾರ್ ಅವರನ್ನು ಪ್ರಶ್ನಿಸಿ ದರು ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು.
ಸದರಿ ಗ್ರಾಮ ಪಂಚಾಯಿತಿ ಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಸುವ ಪ್ರಸ್ತಾವನೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಮಧ್ಯಪ್ರವೇಶಿಸಿದ ಪಿಡಿಓ ಹರೀಶ್ ಸರಕಾರದ ನಿಯಮದಂತೆ ಗ್ರಾ.ಪಂ.ಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಾಗ ೧೦ ಸಾವಿರ ಜನಸಂಖ್ಯೆ ಇರಬೇಕು. ಆದರೆ ನಮ್ಮ ಗ್ರಾ.ಪಂ.ಯಲ್ಲಿ ಆರೂವರೆ ಸಾವಿರ ಜನಸಂಖ್ಯೆ ಮಾತ್ರ ಇದೆ ಎಂದರು. ಆರೋಗ್ಯ ಇಲಾಖೆಯ ಸೌಲಭ್ಯ ಕುರಿತು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ್ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರು ಮಧ್ಯಪ್ರವೇಶಿಸಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಇದರ ನಡುವೆ ಬೇರೆ ಆಸ್ಪತ್ರೆಗೆ ಪಹರೆಯಲ್ಲಿ ಕರ್ತವ್ಯ ನಿರ್ವಹಿಸುವುದು ಬೇಡ ನೀವು ಕೇಂದ್ರದಲ್ಲೇ ಕರ್ತವ್ಯನಿರ್ವಹಿಸಿ ಎಂದು ಆಗ್ರಹಿಸಿದರು. ಕುಡಿಯುವ ನೀರಿಗೆ ತೊಂದರೆಯಾಗದAತೆ ಯೋಜನೆ ರೂಪಿಸುವ ಕುರಿತು ಚರ್ಚೆ ನಡೆಸಲಾಯಿತು.
ನಾಗರಿಕ ಮತ್ತು ಆಹಾರ ಸರಬರಾಜು ಇಲಾಖೆ ಅಧಿಕಾರಿ ಯಶಸ್ವಿನಿ ಮಾಹಿತಿ ನೀಡಿ ತಾಲೂಕಿನಲ್ಲಿ ೭೯೨ ಬಿಪಿಎಲ್ ಕಾರ್ಡನ್ನು ಅಮಾನತು ಗೊಳಿಸಲಾಗಿದೆ. ಶನಿವಾರಸಂತೆ ವ್ಯಾಪ್ತಿಯಲ್ಲಿ ೨೬೨ ಕಾರ್ಡ್ನ್ನು ಅಮಾನತುಗೊಳಿಸಿದ್ದು, ಮುಂದೆ ಪಾರದರ್ಶಕ ವಾಗಿ ಬಿಪಿಎಲ್ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲಾಗುವುದು ಎಂದರು. ಚೆಸ್ಕಾಂ ಇಲಾಖೆಯ ಸುದೀಪ್, ಅರಣ್ಯ ಇಲಾಖೆಯ ವಿಕ್ರಮ್, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಾವಿತ್ರಮ್ಮ, ಶಿಕ್ಷಣ ಇಲಾಖೆಯ ದಿನೇಶ್ ಮುಂತಾದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ನೋಡಲ್ ಅಧಿಕಾರಿ ಮಿಲನ ಭರತ್ ಮಾತನಾಡಿ-ಗ್ರಾಮದ ಜನರ ಸಮಸ್ಯೆ ಮತ್ತು ಯೋಜನೆಗಳನ್ನು ಜನರಿಗೆ ತಿಳಿಸಿಕೊಡುವ ಸಲುವಾಗಿ ಗ್ರಾಮಸಭೆಯನ್ನು ನಡೆಸಲಾಗುತ್ತಿದೆ. ಸಭೆಯಲ್ಲಿ ಜನರಿಂದ ಸಮಸ್ಯೆಗಳು ವ್ಯಕ್ತವಾಗುವುದನ್ನು ಸರಕಾರದ ಗಮನಕ್ಕೆ ತರಲಾಗುತ್ತದೆ. ಈ ಉದ್ದೇಶದಿಂದ ಪ್ರತಿ ಗ್ರಾ.ಪಂ.ಯಲ್ಲಿ ವರ್ಷದಲ್ಲಿ ಎರಡು ಗ್ರಾಮಸಭೆಯನ್ನು ನಡೆಸಬೇಕಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ ಗ್ರಾ.ಪಂ. ಅಧ್ಯಕ್ಷೆ ಗೀತ ಹರೀಶ್ ಮಾತನಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಸರ್ದಾರ್ ಆಹಮ್ಮದ್, ಸದಸ್ಯರಾದ ಶರತ್‌ಶೇಖರ್, ಎನ್.ಎ.ಆದಿತ್ಯ, ಎಸ್.ಎನ್.ರಘು, ಎಸ್.ಆರ್.ಮಧು, ಪಿಡಿಓ ಹರೀಶ್, ಗ್ರಾ.ಪಂ. ಕಾರ್ಯದರ್ಶಿ ದೇವರಾಜ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.