ಮಡಿಕೇರಿ, ಜ. ೨೭: ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರ ಮೊಗದಲ್ಲಿ ಕಳೆದ ರಾತ್ರಿ ಮಂದಹಾಸ ಕಂಡುಬAತು. ಒಂದೆಡೆ ಗಾಯಕರು ಹಾಡುಗಳನ್ನು ಹಾಡುತ್ತಿದ್ದರೆ ಮತ್ತೊಂದೆಡೆ ಪೊಲೀಸರು ಹಾಗೂ ಅವರ ಕುಟುಂಬದವರು ಹರ್ಷೊಲ್ಲಾಸದಿಂದ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ನೆರೆದಿದ್ದ ಸಾರ್ವಜನಿಕರು ಶಿಳ್ಳೆ ಚಪ್ಪಾಳೆಗಳ ಮೂಲಕ ಕಾರ್ಯಕ್ರಮವನ್ನು ಆಸ್ವಾದಿಸಿದರು.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಪೊಲೀಸ್ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂಗೀತ ರಸಮಂಜರಿ ಕೇಳುಗರನ್ನು ರಂಜಿಸಿತು. ಸದಾ ಪೊಲೀಸರ ಬೂಟಿನ ಶಬ್ಧ ಕೇಳಿಬರುತ್ತಿದ್ದ ಮೈದಾನದಲ್ಲಿ ಸಂಗೀತ ಪಸರಿಸಿತು. ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರಿನ ಗಾಯಕರು ‘ದ್ವಾಪರ ದಾಟುತಾ ನನ್ನನೇ ನೋಡಲು.., ನೀಲೆ ನೀಲೆ ಅಂಬರ್ ಪರ್ ಚಾಂದ್ ಜಬ್ ಆಯೆ.., ನಾನು ಕೋ ಕೋ ಕೋಳಿಕೆ ರಂಗಾ.., ಸೇರಿದಂತೆ ಹತ್ತಾರು ಹಿಟ್ ಗೀತೆಗಳನ್ನು ಹಾಡುವ ಮೂಲಕ ಮನರಂಜಿಸಿದರು. ಸರಿಗಮಪ ಸ್ಪರ್ಧಿ ಪೊಲೀಸ್ ಇಲಾಖೆಯ ಸುಬ್ರಮಣಿ ಅವರು ಸಮವಸ್ತçದಲ್ಲೇ ವೇದಿಕೆಗೆ ಆಗಮಿಸಿ ಮನೆಗೆ ಬಂದಿಲ್ಲ ಅಂತ ಬೈಬೇಡಿ ನೀವು ಎಂಬ ಹಾಡನ್ನು "ಮನೆಗ್ ಬಂದಿಲ್ಲ ಅಂತ ಬೈಬೇಡಿ ನೀವು ಬಂದೋಬಸ್ತ್ ಡ್ಯೂಟಿಲಿ ಇದ್ದೀವಲ್ಲ ನಾವು..," ಎಂಬುದಾಗಿ ಪೊಲೀಸ್ ಸಿಬ್ಬಂದಿಗಳ ಕೆಲಸದೊತ್ತಡಕ್ಕೆ ಅನುಗುಣವಾಗಿ ರಚಿಸಲಾದ ಸಾಹಿತ್ಯದೊಂದಿಗೆ ಹಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು.ಈ ಹಾಡಿಗೆ ನಟಿ ಹರ್ಷಿಕಾ ಪೂಣಚ್ಚ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿ ಹೆಜ್ಜೆ ಹಾಕಿದರು. ಇದಾದ ಬಳಿಕ ವೇದಿಕೆಗೆ ಬಂದ ಸರಿಗಮಪ ವಿಜೇತ ಚನ್ನಪ್ಪ ಹುದ್ದರ್ ‘ಯಾರೆ ನೀನು ರೋಜಾ ಹೂವೆ..ಯಾರೆ ನೀನು ಮಲ್ಲಿಗೆ ಹೂವೆ' ಹಾಡನ್ನು ಹಾಡಿ ಚಾಲೆಂಜಿAಗ್ ಸ್ಟಾರ್ ದರ್ಶನ್ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು.ಸರಿಗಮಪ ಸ್ಪರ್ಧಿ ಕೊಡಗಿನ ಅನ್ವಿತ್ ಕುಮಾರ್ 'ಕೈಕೆ ಪಾನ್ ಬನಾರಸ್ ವಾಲಾ..' ಹಾಡಿನ ಮೂಲಕ ಗಮನ ಸೆಳೆದರು. ಕೊಡಗಿನ ಪಂಚಮ್ ಬೋಪಣ್ಣ ನಿಪ್ಪ್ಲಳ್ಪವ್ವ ಬೊಳ್ಳವ್ವ ಬೊಳ್ಳೆ ಕಳ್ಳವ್ವಾ.... ಕೊಡವ ಹಾಡಿನ ಮೂಲಕ ಆಕರ್ಷಿಸಿದರು. ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್ ಅವರು ' ತನ್ಮಯಳಾದೆನು ತಿಳಿಯುವ ಮುನ್ನವೇ..' ಹಾಡಿನ ಮೂಲಕ ಇಂಪು ನೀಡಿದರು. ಅನ್ವಿತ್ ಕುಮಾರ್ ಸುಬ್ರಮಣಿ ಚನ್ನಪ್ಪ 'ಹೇ.,ರುಕ್ಕಮ್ಮ ನಮ್ಮ ಊರೆ ಊರಮ್ಮ." ಚನ್ನಪ್ಪ ಅನ್ವಿತ್ ‘ಹುಟ್ಟಿದರೆ ಕನ್ನಡನಾಡಲ್ ಹುಟ್ಟಬೇಕು..' ಹಾಡುಗಳ ಮೂಲಕ ಮನರಂಜಿಸಿದರು.. ನಟಿ ಹರ್ಷಿಕಾ ಪೂಣಚ್ಚ ಕಲಾವಿದರಾದ ಜಿ.ಚಿದ್ವಿಲಾಸ್ 'ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ..' ಹಾಡಿನ ಮೂಲಕ ರಂಜಿಸಿದರು. ಈ ಹಾಡಿಗೆ ಹರ್ಷಿಕಾ ಕೋರಿಕೆ ಮೇರೆಗೆ ಎಸ್ಪಿ ರಾಮರಾಜನ್ ಹಾಗೂ ಇತರ ಕೆಲ ಅಧಿಕಾರಿಗಳು ನಟಿ ತೇಜಸ್ವಿನಿ ಶರ್ಮ ಮೈಕ್ ಹಿಡಿದು ಧನಿಗೂಡಿಸಿದ್ದು ವಿಶೇಷವಾಗಿತ್ತು. ಕೊಡಗು ಪೊಲೀಸ್ ಕಲಾವಿದರಿಂದ ಮೂಡಿಬಂದ 'ಜೈ ಭಾರತ ಜನನಿಯ ತನುಜಾತೆ ಹಾಗೂ ಜೋಗದ ಸಿರಿ ಬೆಳಕಿನಲ್ಲಿ.' ಸಮೂಹ ಗಾಯನ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.ಸನ್ಮಾನಿತರ ಪೈಕಿ ಛದ್ಮವೇಷ ಕಲಾವಿದ ನಿವೃತ್ತ ಎಎಸ್ ಐ ಪಾರ್ಥ ಅವರು ಹಿರಣ್ಯ ಕಶ್ಯಪು ವೇಷದಲ್ಲಿ ಆಗಮಿಸಿ ಸನ್ಮಾನ ಸ್ವೀಕರಿಸಿ ಗಮನಸೆಳೆದರು. ನಿಸ್ತಂತು ಘಟಕದ ಮುಖ್ಯಪೇದೆ ಈರಮಂಡ ವಿಜಯ್ ಸಿನಿಮಾ ಕ್ಷೇತ್ರದ ಸೇವೆಗಾಗಿ ಸನ್ಮಾನ ಸ್ವೀಕರಿಸಿದರು. ಮಂಗಳೂರಿನ ಚಿತ್ರಕಲಾವಿದ ಲಕ್ಷ್ಮಿ ನಾರಾಯಣ್ ಎಸ್ಪಿ ರಾಮರಾಜನ್ ಅವರ ಭಾವಚಿತ್ರವನ್ನು ಸ್ಥಳದಲ್ಲೆ ಬಿಡಿಸಿ ನೀಡಿದರು. ಕಾರ್ಯಕ್ರಮದ ಒಟ್ಟು ಜವಾಬ್ದಾರಿಕೆ ವಹಿಸಿದ್ದ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ವೇದಿಕೆಯಲ್ಲೆಲ್ಲೂ ಕಾಣಿಸಿಕೊಳ್ಳಲಿಲ್ಲವಾದರೂ ಮಂಗಳೂರಿನ ಕಲಾವಿದರು ಮಹೇಶ್ ಕುಮಾರ್ ಅವರನ್ನು ಬಲವಂತವಾಗಿ ವೇದಿಕೆಗೆ ಕರೆತಂದು ಸನ್ಮಾನಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಗಾಯಕರು ಹಾಡಿದ ವಿವಿಧ ಟಪಾಂಗುತ್ತಿ ಹಾಡುಗಳಿಗೆ ಎಸ್ಪಿ ರಾಮರಾಜನ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಕಲಾವಿದರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ‘ವಿ ಆರ್ ವಿಥ್ ಯು'ಕೊಡಗು ಪೊಲೀಸ್ ಎಂಬ ಧ್ಯೇಯ ಗೀತೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಖ್ಯಾತ ನಿರೂಪಕರಾದ ಮೊನಿಷಾ, ಶಿಶಾನ್ ನಿರೂಪಿಸಿದರು. - ಉಜ್ವಲ್