ಪೊನ್ನಂಪೇಟೆ, ಜ. ೨೭: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೩ನೇ ಜನ್ಮದಿನದ ಅಂಗವಾಗಿ ಎನ್ ಎಸ್ ಎಸ್, ಯುವ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಯುವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಅವರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸೃಜನಶೀಲರಾಗಬೇಕು ಎಂದರು.

ವಿವೇಕಾನAದರು ನಂಬಿಕೆ ಇರಿಸಿದ್ದ ಯುವ ಸಂಪತ್ತು ಇಂದು ಮೊಬೈಲ್ ಗೀಳಿಗೆ ಸಿಲುಕಿ, ಮಾನಸಿಕವಾಗಿ, ದೈಹಿಕವಾಗಿ ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಯುವ ಜನರು ಎಚ್ಚೆತ್ತುಕೊಂಡು ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ನೈತಿಕವಾಗಿ ಆರೋಗ್ಯವಂತರಾಗುವುದರ ಜೊತೆಗೆ ಸುಭದ್ರ ರಾಷ್ಟç ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು. ಎನ್‌ಎಸ್‌ಎಸ್ ಅಧಿಕಾರಿಗಳಾದ ಎನ್.ಪಿ. ರೀತ, ಎಂ.ಎ. ಕುಶಾಲಪ್ಪ, ರೋವರ್ಸ್ ಮತ್ತು ರೇಂಜರ್ಸ್ ಅಧಿಕಾರಿ ಸೀಮಾ, ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಅಧಿಕಾರಿಗಳು ಇದ್ದರು.