ಮಡಿಕೇರಿ, ಜ.೨೭ : ಪರಾಕ್ರಮ್ ದಿವಸ್-ಪರೀಕ್ಷಾ ಪೆ ಚರ್ಚೆ ೯ ನೇ ಆವೃತ್ತಿಯನ್ನು ಕೊಡಗಿನ ಪಿಎಂ ಕೇಂದ್ರಿಯ ವಿದ್ಯಾಲಯದಲ್ಲಿ ಅರ್ಥಪೂರ್ಣವಾಗಿ ನಡೆಸಲಾಯಿತು. ಜವಾಹರ್ ನವೋದಯ ವಿದ್ಯಾಲಯ, ಸೇಂಟ್ ಜೋಸೆಫ್ಸ್ ಕಾಂಪೋಸಿಟ್ ಹೈಸ್ಕೂಲ್ ಮತ್ತು ಪಿಯು ಕಾಲೇಜು, ಕ್ರೆಸೆಂಟ್ ಸ್ಕೂಲ್ ಮತ್ತು ಪಿಎಂಶ್ರೀ ಕೇಂದ್ರಿಯ ವಿದ್ಯಾಲಯದಿಂದ ಕೊಡಗಿನ ಒಟ್ಟು ೧೦೦ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು.

ಭಾರತ್ ಹೈ ಹಮ್ ಸರಣಿಯ ಐದು ಸಂಚಿಕೆ ಪ್ರದರ್ಶಿಸಲಾಯಿತು, ತದನಂತರ ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತರನ್ನು ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಯಿತು. ಪಿಎಂಶ್ರೀ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲರಾದ ಮಹೇಶ್ ಕುಮಾರ್ ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಚಟುವಟಿಕೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವ ಹಂಚಿಕೊAಡರು.