ವೀರಾಜಪೇಟೆ, ಜ. ೨೭: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಭಾನುವಾರ ತಡರಾತ್ರಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಜಿಲ್ಲೆಗೆ ಆಗಮಿಸಿದ ಶ್ರೀಗಳು, ತಡರಾತ್ರಿ ವೀರಾಜಪೇಟೆಗೆ ತಲುಪಿದರು. ಶ್ರೀಗಳು ಆಗಮಿಸಿದೊಡನೇ,೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಶಾಸ್ತೊçÃಕ್ತವಾಗಿ ಅವರನ್ನು ಮನೆಗೆ ಬರಮಾಡಿಕೊಳ್ಳಲಾಯಿತು. ಸಕಲ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ, ಆಗಮಿಸಿದ ಭಕ್ತಾದಿಗಳಿಗೆ ಶ್ರೀಗಳು ಆಶೀರ್ವಚನ ನೀಡಿದರು.
ನಾಡಿನ ಅತ್ಯಂತ ಶ್ರೇಷ್ಠ ಹಾಗೂ ಗೌರವಾನ್ವಿತ ಮಠದ ಜಗದ್ಗುರುಗಳು ನನ್ನ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದ್ದು ನನ್ನ ಜೀವನವನ್ನು ಪಾವನವನ್ನಾಗಿಸಿತು ಎಂದು ಪೊನ್ನಣ್ಣ ಹೇಳಿದರು.
ಈ ಸಂದರ್ಭದಲ್ಲಿ ವೀರಾಜಪೇಟೆ ವಿನಾಯಕ ನಗರದಲ್ಲಿರುವ ಒಕ್ಕಲಿಗ ಗೌಡ ಜನಾಂಗದವರು ಪಾದ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧÀ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪುರಸಭೆ ಅಧÀ್ಯಕೆÀ್ಷ ಎಂ.ಕೆ ದೇಚಮ್ಮ, ಸದಸ್ಯರಾದ ರಂಜಿ ಪೂಣಚ್ಚ, ಡಿ.ಪಿ ರಾಜೇಶ್, ಮಹಮ್ಮದ್ ರಾಫಿ, ಮತೀನ್, ರಜನಿಕಾಂತ್, ಜಲೀಲ್, ಉದ್ಯಮಿ ಕಾಣತಂಡ ಜಗದೀಶ್, ನರೇಂದ್ರ ಕಾಮತ್, ಸೇರಿದಂತೆ ಇನ್ನಿತರರು ಇದ್ದರು.