ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜ. ೨೭: ಮಹಿಳೆಯರನ್ನು ಕಾಫಿ ಉದ್ಯಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅವರಿಗೆ ಸೂಕ್ತ ಉದ್ಯೋಗಾವಕಾಶ ಒದಗಿಸುವದರ ಜೊತೆಗೆ ಕಾಫಿಯ ಆಂತರಿಕ ಬೇಡಿಕೆಯನ್ನೂ ಹೆಚ್ಚಿಸಲು ಕಾಫಿ ಮಂಡಳಿಯು ಕರ್ನಾಟಕ ರಾಷ್ಟಿçÃಯ ಜೀವನೋಪಾಯ ಮಿಷನ್‌ನ ಸಹಯೋಗದೊಂದಿಗೆ ಮಹತ್ತರವಾದ ಯೋಜನೆಯೊಂದನ್ನು ಜಾರಿಗೊಳಿಸಿದೆ.

ಈ ಯೋಜನೆಯ ಪ್ರಕಾರ ಕರ್ನಾಟಕದಾದ್ಯಂತ ರಾಷ್ಟ್ರೀಯ ಜೀವನೋಪಾಯ ಮಿಷನ್ ಸ್ವ-ಸಹಾಯ ಗುಂಪುಗಳ (Sಊಉs) ಸುಮಾರು ಒಂದು ಲಕ್ಷ ಮಹಿಳಾ ಸದಸ್ಯರಿಗೆ ಕಾಫಿ ತಯಾರಿಸುವ ತಂತ್ರಗಳು ಮತ್ತು ಗ್ರಾಮೀಣ ಕೆಫೆ ನಿರ್ವಹಣೆಯಲ್ಲಿ ಸಬಲೀಕರಣ ನೀಡುವ ಯೋಜನೆಯನ್ನು ಸಹಭಾಗಿತ್ವದಲ್ಲಿ ಪ್ರಾರಂಭಿಸಿದೆ. ಇದು ಮುಖ್ಯವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೆಫೆಗಳ ಸ್ಥಾಪನೆಗೆ ಅನುಕೂಲವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ, ಇದು ಅಧಿಕೃತ ಉತ್ಕೃಷ್ಟ ಫಿಲ್ಟರ್ ಕಾಫಿಯ ಅನುಭವವನ್ನು ಕಾಫಿ ಪ್ರಿಯರಿಗೆ ನೀಡಲಿದೆ.

ಈ ಯೋಜನೆಯ ತಿಳುವಳಿಕೆ ಒಪ್ಪಂದಕ್ಕೆ (ಒoU) ಇತ್ತೀಚೆಗೆ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಡಾ. ಕೆ. ಜಿ. ಜಗದೀಶ ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್‌ನ (ಓಚಿಣioಟಿಚಿಟ ಐivಟihooಜ ಒissioಟಿ) ನಿರ್ದೇಶಕಿ ಪಿ.ಐ. ಶ್ರೀವಿದ್ಯಾ ಸಹಿ ಹಾಕಿದರು. ಮಹಿಳಾ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಪ್ರಭಾವೀ ಪರಿಣಾಮವನ್ನು ಸೃಷ್ಟಿಸುವಲ್ಲಿ ಈ ಯೋಜನೆಯು ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಫಿ ಮಂಡಳಿಯು ವಿಷಯ ತಜ್ಞರು ಮತ್ತು ಆಂತರಿಕ ತಜ್ಞರ ಸಹಯೋಗದೊಂದಿಗೆ, ಪರಿಣಾಮಕಾರಿ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಅನುಷ್ಠಾನ ಮತ್ತು ಮೇಲ್ವಿಚಾರಣಾ ಪಾಲುದಾರರಾದ ಅಟಲ್ ಇನ್ಕುö್ಯಬೇಷನ್ ಸೆಂಟರ್ ಆಫ್ ಕಾಫಿ ಮಂಡಳಿ (ಂIಅ-ಅಅಖI-ಅಇಆ) ನೊಂದಿಗೆ ಕೆಲಸ ಮಾಡುತ್ತದೆ.

ರಾಜ್ಯಾದ್ಯಂತ ಕಾಫಿಯನ್ನು ಉತ್ತೇಜಿಸುವ ನಮ್ಮ ದೀರ್ಘಕಾಲಿನ ಯೋಜನೆಯ ಮೊದಲ ಹೆಜ್ಜೆ ಈ ಮೈಲಿಗಲ್ಲು ಯೋಜನೆಯಾಗಿದೆ ಎಂದು ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಡಾ. ಕೆ. ಜಿ. ಜಗದೀಶ ‘ಶಕಿ’್ತಗೆ ತಿಳಿಸಿದರು. ಜೀವನೋಪಾಯಕ್ಕೆ ಬೆಂಬಲ ನೀಡುವ ಎನ್‌ಎಲ್‌ಎಂ ಅಡಿಯಲ್ಲಿ ಮಹಿಳೆಯರಿಗೆ ಇತರ ಉದ್ಯಮಶೀಲತಾ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುತ್ತಿದ್ದು, ಈ ಕಾಫಿ ಸೂಕ್ಷö್ಮ ಉದ್ಯಮಶೀಲತಾ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಎಂದರು.

ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದ್ದು ಆರಂಭದಲ್ಲಿ ಎನ್‌ಎಲ್‌ಎಂ ಗುರುತಿಸಿದ ೪೦೦ ಮಹಿಳೆಯರಿಗೆ ಬೆಂಗಳೂರಿನಲ್ಲಿರುವ ಕಾಫಿ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಮಾಸ್ಟರ್ ತರಬೇತುದಾರರಾಗಲು ಒಂದು ವಾರದ ತರಬೇತಿ ನೀಡಲಾಗುವುದು, ಎರಡನೇ ಹಂತದಲ್ಲಿ ತರಬೇತಿ ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಪಡೆದವರು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇತರ ಸಾವಿರಾರು ಮಹಿಳೆಯರಿಗೆ ಆಯಾ ಜಿಲ್ಲೆಗಳಲ್ಲಿಯೇ ತರಬೇತಿ ನೀಡಲಿದ್ದಾರೆ ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಇಂದಿಗೂ ಫಿಲ್ಟರ್ ಕಾಫಿಗೆ ಬೇಡಿಕೆ ಇದ್ದರೂ ಗುಣಮಟ್ಟದ ಕಾಫಿ ತಯಾರಿಕೆಯಲ್ಲಿ ಮಾರಾಟಗಾರರು ಹಿಂದುಳಿದಿದ್ದಾರೆ ಎಂದು ಹೇಳಿದ ಜಗದೀಶ್ ಆ ಸ್ಥಾನವನ್ನು ಮಹಿಳೆಯರಿಂದ ತುಂಬಲು ಯೋಜಿಸಲಾಗಿದ್ದು ಅವರಿಗೂ ಉದ್ಯೋಗಾವಕಾಶ ದೊರೆಯಲಿದೆ ಎಂದರು. ತರಬೇತುದಾರರ ತರಬೇತಿ (ಟಿಒಟಿ) ಕಾರ್ಯಕ್ರಮದ ಪರಿಣಾಮಕಾರಿ ಕಾರ್ಯಗತಗೊಳಿಸುವಿಕೆಯನ್ನು ಸುಗಮಗೊಳಿಸಲು ಮತ್ತು ಕ್ಷೇತ್ರ ಮಟ್ಟದ ತರಬೇತಿ ಅವಧಿಗಳ ಆರಂಭಿಕ ಬ್ಯಾಚ್‌ಗಳನ್ನು ಮೇಲ್ವಿಚಾರಣೆ ಮಾಡಲು ಎನ್‌ಎಲ್‌ಎಂ ಭಾರತೀಯ ಕಾಫಿ ಮಂಡಳಿಯ ಸಲಹಾ ಪರಿಣತಿಯನ್ನು ತೊಡಗಿಸಿಕೊಂಡಿದೆ. ಅನುಷ್ಠಾನ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಎಐಸಿ-ಸಿಸಿಆರ್‌ಐ-ಸಿಇಡಿ, ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳು ಮತ್ತು ಕೆಫೆ ನಿರ್ವಹಣಾ ಕಾರ್ಯಾಗಾರಗಳ ಮೂಲಕ ಯೋಜನೆಯನ್ನು ತಲುಪಿಸಲು ಬದ್ಧವಾಗಿದೆ. ಈ ಉಪಕ್ರಮದ ಮೂಲಕ ೨,೫೦೦ ಕಾಫಿ ಕಿಯೋಸ್ಕ್ಗಳನ್ನು ಸ್ಥಾಪಿಸುವ ಮತ್ತು ಯಶಸ್ವಿ ಕಾಫಿ ಉದ್ಯಮಿಗಳಾಗಲು ಸ್ವ-ಸಹಾಯ ಗುಂಪುಗಳ (Sಊಉs) ಒಂದು ಲಕ್ಷ ಮಹಿಳೆಯರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.

ಪ್ರತಿ ಕೆಫೆಯಲ್ಲಿ ನಿತ್ಯ ೨೫೦ ಕಪ್‌ಗಳಷ್ಟು ಕಾಫಿಯನ್ನು ಮಾರಾಟ ಮಾಡಿದರೆ ಮಾತ್ರ ಕೆಫೆ ನಡೆಸುವುದು ಲಾಭದಾಯಕ ಆಗುತ್ತದೆ ಎಂದು ಹೇಳಿದ ಜಗದೀಶ್ ಅವರು ಎನ್‌ಎಲ್‌ಎಂ ಅಧಿಕಾರಿಗಳು ಕೆಫೆ ತೆರೆಯಲು ಸರ್ಕಾರಿ ಕಚೇರಿಗಳ ಆವರಣ, ಬಿಬಿಎಂಪಿ ಪ್ರದೇಶ ಇತರ ಸ್ಥಳಗಳ ಗುರುತು ಮಾಡಿ ಕೊಡಲಿದೆ. ಮಂಡಳಿಯು ಕಾಫಿ ತಯಾರಿಕೆಯ ತಂತ್ರಜ್ಞಾನ ಮತ್ತು ಮೆಷಿನ್ ನಿಂದಲೂ ಕಾಫಿ ತಯಾರಿಕೆಯ ತರಬೇತಿಯನ್ನು ಒದಗಿಸಲಿದೆ ಎಂದು ಹೇಳಿದರು.

೨೦೨೪-೨೫ ರ ರಾಜ್ಯ ಬಜೆಟ್‌ಗೆ ಅನುಗುಣವಾಗಿ, ಕರ್ನಾಟಕ ಸರ್ಕಾರವು ಓಐಒ Sಊಉs ನಿಂದ ೧ ಲಕ್ಷ ಮಹಿಳೆಯರಿಗೆ ಕಾಫಿ ಉದ್ಯಮಿಗಳಾಗಿ ತರಬೇತಿ ನೀಡಲು ರೂ. ೨೫ ಕೋಟಿ ಹಂಚಿಕೆ ಮಾಡಿದೆ, ಈ ಉಪಕ್ರಮವು ಮಹಿಳಾ ನೇತೃತ್ವದ ಉದ್ಯಮಗಳನ್ನು ಸಬಲೀಕರಣಗೊಳಿಸುತ್ತದೆ, ಕೌಶಲ್ಯ, ಉತ್ಪಾದಕತೆ ಮತ್ತು ಮಾರುಕಟ್ಟೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ, ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುತ್ತದೆ. ಸಂಭಾವ್ಯ ಮತ್ತು ಅಸ್ತಿತ್ವದಲ್ಲಿರುವ ಉದ್ಯಮಿಗಳನ್ನು ಬೆಂಬಲಿಸುವ ಮೂಲಕ, ಇದು ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ, ಬಡತನವನ್ನು ಕಡಿಮೆ ಮಾಡುತ್ತದೆ ಮತ್ತು ಬಡತನದ ಅಂಚಿನಲ್ಲಿರುವ ಮಹಿಳೆಯರಿಗೆ ಅವಕಾಶಗಳನ್ನು ಬೆಳೆಸುತ್ತದೆ.