ಸೋಮವಾರಪೇಟೆ, ಜ.೨೭ : ಸೋಮವಾರಪೇಟೆಯಲ್ಲಿ ರೂ. ೩ ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನೂತನ ಅಗ್ನಿಶಾಮಕ ಠಾಣೆಯನ್ನು ಶಾಸಕ ಡಾ. ಮಂತರ್ ಗೌಡ ಅವರು ಲೋಕಾರ್ಪಣೆಗೊಳಿಸಿದರು.

ಈವರೆಗೆ ಖಾಸಗಿ ಕಟ್ಟಡದಲ್ಲಿ ಬಾಡಿಗೆಗಿದ್ದ ಅಗ್ನಿಶಾಮಕ ಠಾಣೆಯು ಇದೀಗ ಸ್ವಂತ ನಿವೇಶನ ಹಾಗೂ ಕಟ್ಟಡಕ್ಕೆ ಸ್ಥಳಾಂತರಗೊAಡಿದ್ದು, ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಮೂಲಕ ಕೆ-ಸೇಫ್-೨ ಯೋಜನೆಯಡಿ ೩ನೇ ಅಗ್ನಿಶಾಮಕ ಠಾಣೆ ನಿರ್ಮಾಣ ಗೊಂಡಿದ್ದು, ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಒಟ್ಟು ೩ ಕೋಟಿ ವೆಚ್ಚದ ಅನುದಾನ ದಡಿ ನೆಲ ಅಂತಸ್ತು, ಒಳಾಂಗಣ, ಗ್ಯಾರೇಜ್, ವಿಶೇಷ ಚೇತನರ ಶೌಚಾಲಯ, ಕಚೇರಿ ಕೊಠಡಿ, ಅಧಿಕಾರಿಗಳ ಕೊಠಡಿ, ದಾಖಲೆ/ಉಗ್ರಾಣ ಕೊಠಡಿ, ತರಗತಿ ಕೊಠಡಿ, ವಿಶ್ರಾಂತಿ ಕೊಠಡಿ ಸೇರಿದಂತೆ ೩ ವಾಹನಗಳ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಅಗ್ನಿಶಾಮಕ ಠಾಣೆ ಯನ್ನು ಶಾಸಕರು ಲೋಕಾರ್ಪಣೆ ಗೊಳಿಸಿದರು. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ೨೩ ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಂಡಿದ್ದು, ಕ್ಷೇತ್ರದ ಶಾಸಕರು ನೂತನ ಕಟ್ಟಡವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕ ಮಂತರ್ ಗೌಡ, ಸೋಮವಾರಪೇಟೆ ವ್ಯಾಪ್ತಿಯು ಬೆಟ್ಟಗುಡ್ಡಗಳಿಂದ ಕೂಡಿದ್ದು, ತುರ್ತು ಸಂದರ್ಭ ಅಗ್ನಿ ಅವಘಡಗಳು ಸಂಭವಿಸಿದರೆ ಸ್ಥಳಕ್ಕೆ ತೆರಳಲು ಆಧುನಿಕ ವಾಹನಗಳ ಅವಶ್ಯಕತೆಯಿದೆ. ಫೋರ್ ವೀಲ್ ವಾಹನಗಳಿಗೆ ಬೇಡಿಕೆ ಸಲ್ಲಿಸಿದರೆ, ಸಂಬAಧಿಸಿದ ಸಚಿವರೊಂದಿಗೆ ವ್ಯವಹರಿಸಿ ನೂತನ ವಾಹನಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಗ್ನಿ ಶಾಮಕ ಠಾಣೆಯ ವಾಹನಗಳ ಆಧುನೀಕರಣಕ್ಕೆ ಕ್ರಮ ವಹಿಸಲೇಬೇಕಿದೆ. ೩ಆರನೇ ಪುಟಕ್ಕೆ

(ಮೊದಲ ಪುಟದಿಂದ) ಬೆಟ್ಟಗುಡ್ಡಗಳಿಗೆ ಈಗಿರುವ ವಾಹನಗಳು ತಲುಪುವುದಿಲ್ಲ. ಈ ಹಿಂದೆ ಕೋಟೆ ಬೆಟ್ಟಕ್ಕೆ ಬೆಂಕಿ ಬಿದ್ದಾಗ ನಾವು ತಲುಪಿದ್ದರೂ ಇಲಾಖೆಯ ವಾಹನ ತಲುಪಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಸುಧಾರಿತ ವಾಹನಗಳ ಅವಶ್ಯಕತೆ ಹೆಚ್ಚಿದ್ದು, ಬೇಡಿಕೆ ಪಟ್ಟಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅಗ್ನಿ ಅವಘಡಗಳನ್ನು ತಡೆಗಟ್ಟಲು ಸಾರ್ವಜನಿಕರೂ ಸಹಕಾರ ನೀಡಬೇಕು. ಬೆಂಕಿ ಅವಘಡದ ಬಗ್ಗೆ ಸಾರ್ವಜನಿಕರು ತಕ್ಷಣ ಮಾಹಿತಿ ನೀಡಬೇಕು. ಮಾಹಿತಿ ಬಂದ ತಕ್ಷಣ ಇಲಾಖೆಯವರೂ ಸಹ ತಕ್ಷಣ ಸ್ಪಂದಿಸಬೇಕು. ಕಾಡ್ಗಿಚ್ಚುಗಳು ಉಂಟಾಗದAತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂತರ್ ಗೌಡ ಸೂಚಿಸಿದರು.

ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂದು ಅಗ್ನಿಶಾಮಕ ಇಲಾಖೆಯ ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿ ಶಾಮಕ ಅಧಿಕಾರಿ ಜಯರಾಮಯ್ಯ ಗಮನ ಸೆಳೆದರು. ಈಗಾಗಲೇ ಆರ್‌ಎಂಸಿ vಆವರಣದಲ್ಲಿ ಇಲಾಖೆಗೆ ಸೇರಿದ ಜಾಗ ಇದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣದ ಅಗತ್ಯವಿದೆ ಎಂದರು.

ಈ ಬಗ್ಗೆ ಬೇಡಿಕೆ ಸಲ್ಲಿಸಿದರೆ ಸಂಬAಧಿಸಿದ ಸಚಿವರ ಗಮನ ಸೆಳೆದು, ಶೀಘ್ರವಾಗಿ ಸ್ಪಂದಿಸಲಾಗುವುದು. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿದರೆ ಖುಷಿಯಿಂದ ಕೆಲಸ ಮಾಡುತ್ತಾರೆ. ಅವರಿಂದ ಉತ್ತಮ ಕೆಲಸವನ್ನೂ ನಿರೀಕ್ಷೆ ಮಾಡಬಹುದು ಎಂದರು.

ಸರ್ಕಾರದ ಇತರ ಇಲಾಖೆಗಳ ಕಟ್ಟಡಗಳು ಸುಸ್ಥಿತಿಯಲ್ಲಿರುತ್ತವೆ. ಆದರೆ ಫೈರ್ ಸ್ಟೇಷನ್ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸುವುದು ಕಡಿಮೆ. ಸರ್ಕಾರ ಠಾಣೆಗೆ ಅನುದಾನ ಒದಗಿಸಿದ್ದು, ಇದೀಗ ಸೋಮವಾರಪೇಟೆಯಲ್ಲಿ ಉತ್ತಮವಾದ ಕಟ್ಟಡ ನಿರ್ಮಾಣವಾಗಿದೆ. ಇದರ ಸದ್ಬಳಕೆ ಆಗಬೇಕು ಎಂದು ಅಭಿಪ್ರಾಯಿಸಿದರು.

ಈ ಸಂದರ್ಭ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಅಭಿಯಂತರ ಎಂ. ರಾಜೇಶ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ. ಚಂದನ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಜಿ. ರಾಜೇಶ್, ಅರಣ್ಯ ಇಲಾಖೆಯ ಆರ್‌ಎಫ್‌ಓ ಶೈಲೇಂದ್ರ, ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಶಶಿಕುಮಾರ್, ಉಪಾಧ್ಯಕ್ಷ ನತೀಶ್ ಮಂದಣ್ಣ, ಸದಸ್ಯ ಚೇತನ್, ಮಂಜುಳಾ ಸುಬ್ರಮಣಿ, ಆರ್‌ಎಂಸಿ ಮಾಜೀ ಅಧ್ಯಕ್ಷ ಬಿ.ಬಿ. ಸತೀಶ್, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಪ್ರಮುಖರಾದ ಚೇತನ್, ಕೆ.ಎ. ಆದಂ ಸೇರಿದಂತೆ ಇತರರು ಉಪಸ್ಥಿತರಿದ್ದರು.