ಮಡಿಕೇರಿ, ಜ. ೧೦ : ಭಾರತೀಯ ವಾಯುಸೇನೆಯ ಕಮಿಷನ್ಡ್ ಆಫಿಸರ್ ಆಗಿ ಜಿಲ್ಲೆಯ ಚೊಟ್ಟೇಕಾಳಪಂಡ ಕ್ಷಮಾ ಪೂಣಚ್ಚ ಅವರು ಆಯ್ಕೆಗೊಂಡಿದ್ದಾರೆ. ಕಮಿಷನ್ಡ್ ಆಫಿಸರ್ ಪರೀಕ್ಷೆಯನ್ನು ರಾಷ್ಟçದ ೨ ಲಕ್ಷ ಮಂದಿ ಬರೆದಿದ್ದು ೨೬ ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಫಿಸರ್‌ಗಳಾಗಿ ಆಯ್ಕೆಯಾಗಿದ್ದು, ಕ್ಷಮಾ ಅವರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಡಿಸೆಂಬರ್‌ನಿAದಲೆ ಈ ಸಂಬAಧ ಅವರು ತರಬೇತಿ ಪಡೆಯುತ್ತಿದ್ದಾರೆ. ಕ್ಷಮಾ ಅವರು ಬೆಸಗೂರಿನ ಚೊಟ್ಟೇಕಾಳಪಂಡ ಪ್ರಥ್ವಿ ಹಾಗೂ ಬಿಂದು ದಂಪತಿಯ ಪುತ್ರಿ.