ಮಡಿಕೇರಿ, ಜ. ೧೦: ತಾ. ೨೬ ರಂದು ಗಣರಾಜ್ಯೋತ್ಸವ ಅಂಗವಾಗಿ ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ಗೆ ಜಿಲ್ಲೆಯ ಅರಮೇರಿಯ ಕಾಳಮಂಡ ಕೃಷ್ಮ ಕಾವೇರಮ್ಮ ಅವರು ಮೈಸೂರು ೩-ಕರ್ನಾಟಕ ಬೆಟಾಲಿಯನ್ ಮೂಲಕ ಆಯ್ಕೆಯಾಗಿದ್ದಾರೆ. ಮೈಸೂರಿನ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ.ಸಿ.ಎ ವ್ಯಾಸಂಗ ಮಾಡುತ್ತಿರುವ ಇವರು, ಅರಮೇರಿ ಗ್ರಾಮದ ಕಾಳಮಂಡ ಸಂತೋಷ್ ಹಾಗೂ ಲತಾ ದಂಪತಿಯ ಪುತ್ರಿ.