ಮಡಿಕೇರಿ, ಜ. ೧೦: ಮದೆನಾಡು ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ೩ನೇ ವರ್ಷದ ಅದ್ದೂರಿ ಶಾಲಾ ವಾರ್ಷಿಕೋತ್ಸವ ನಡೆಯಿತು. ಸೋಮೇಶ್ವರನಾಥ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಿವೈಎಸ್‌ಪಿ ಮಹೇಶ್ ಕುಮಾರ್ ಅವರು ಉಪಸ್ಥಿತರಿದ್ದು, ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್. ವಹಿಸಿದ್ದರು.

ಹುದೇರಿ ರಾಜೇಂದ್ರ, ಅಧ್ಯಕ್ಷರು, ಮದೆ ಮಹೇಶ್ವರ ಪದವಿಪೂರ್ವ ಕಾಲೇಜು ಸಮಿತಿ, ಪಟ್ಟಡ ಲೋಬಯ್ಯ ಮತ್ತು ಬಿ.ಆರ್. ಜೋಯಪ್ಪ, ಸದಸ್ಯರು ಮದೆ ಮಹೇಶ್ವರ ಪದವಿಪೂರ್ವ ಕಾಲೇಜು ಸಮಿತಿ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಾರ್ಷಿಕ ವರದಿಯನ್ನು ಮುಖ್ಯ ಶಿಕ್ಷಕಿ ಪುನೀತಾ ಓದಿದರು.

ಯೋಗಾಸನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ೫ನೇ ತರಗತಿ ವಿದ್ಯಾರ್ಥಿ ಸಿಂಚನಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸಹ ಶಿಕ್ಷಕಿ ಜಲಜಾಕ್ಷಿ, ಚೈತ್ರ ಅವರು ನಡೆಸಿಕೊಟ್ಟರು. ನಂತರ ಪೋಷಕರಿಗೆ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಆನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಯಶ್ರೀ ಸ್ವಾಗತಿಸಿ, ನಯನ ವಂದಿಸಿದರು. ಶಿಲ್ಪ ಮತ್ತು ನೌಶಿದ ಕಾರ್ಯಕ್ರಮ ನಿರೂಪಿಸಿದರು.