ಮುಳ್ಳೂರು, ಜ. ೧೦: ‘ದೇಶದ ಅಭಿವೃದ್ಧಿಯಲ್ಲಿ ಶೇ. ೫೦ ರಷ್ಟು ಮಕ್ಕಳ ಕೊಡುಗೆ ಇದ್ದು ಈ ನಿಟ್ಟಿನಲ್ಲಿ ಸರಕಾರ, ಇಲಾಖೆ ಅಧಿಕಾರಿಗಳು ಮಕ್ಕಳ ಬೆಳವಣಿಗೆಗೆ ರಕ್ಷಕರಾಗಿ ನಿಂತುಕೊಳ್ಳಬೇಕಾಗುತ್ತದೆ’ ಎಂದು ‘ನಾವು ಪ್ರತಿಷ್ಠಾನ ಟ್ರಸ್ಟ್ನ’ ಕಾರ್ಯಕಾರಿ ನಿರ್ದೇಶಕಿ ಪಿ.ಸುಮನ್ ಮ್ಯಾಥ್ಯು ಅಭಿಪ್ರಾಯ ಪಟ್ಟರು. ಅವರು ಸಮೀಪದ ನಿಡ್ತ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಿಡ್ತ ಗ್ರಾಮ ಪಂಚಾಯಿತಿ ಮತ್ತು ‘ನಾವು ಪ್ರತಿಷ್ಠಾನ’ ಸಂಸ್ಥೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ನಿಡ್ತ ಗ್ರಾ.ಪಂ. ಮಟ್ಟದ ಮಕ್ಕಳ ಗ್ರಾಮಸಭೆಯಲ್ಲಿ ಮಾಹಿತಿ ನೀಡುತ್ತಿದ್ದರು-ಮಕ್ಕಳ ಬುದುಕಿನ ಹಕ್ಕು ಶೂನ್ಯದಿಂದ ಪ್ರಾರಂಭವಾಗುತ್ತದೆ ಮಕ್ಕಳ ರಕ್ಷಣೆ, ಮಕ್ಕಳ ವಿಕಾಸ, ಮಕ್ಕಳು ಭಾಗವಹಿಸುವ ಹಕ್ಕು ಸೇರಿದಂತೆ ಹಲವಾರು ಮಕ್ಕಳ ಹಕ್ಕುಗಳಿರುತ್ತದೆ ಮಕ್ಕಳು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಇನ್ನು ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಶೇ. ೫೦ ರಷ್ಟಿದೆ ಎಂದ ಅವರು ನಮ್ಮ ದೇಶದಲ್ಲಿ ಶೇ. ೪೫ ರಷ್ಟು ಮಕ್ಕಳು ಗ್ರಾಮೀಣ ಪ್ರದೇಶದಲ್ಲಿದ್ದಾರೆ ಆದರೆ ಮಕ್ಕಳಿಗೆ ಹಲವಾರು ಸಮಸ್ಯೆಗಳಿರುತ್ತದೆ ಈ ಉದ್ದೇಶದಿಂದ ಗ್ರಾ.ಪಂ. ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಗುತ್ತದೆ ಎಂದರು.

ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಮಕ್ಕಳ ಶಿಕ್ಷಣದ ಹಕ್ಕು, ಬಾಲ ಕಾರ್ಮಿಕ ತಡೆ, ಸಾಮಾಜಿಕ ಜಾಲತಾಣದಿಂದ ಮಕ್ಕಳ ಮೇಲಾಗುತ್ತಿರುವ ಸಮಸ್ಯೆ ಹಾಗೂ ಪೋಕ್ಸೊ ಕಾಯಿದೆ ಕುರಿತು ಕುಶಾಲನಗರ ಚೈಲ್ಡ್ಲೈನ್ ಕೇಂದ್ರದ ಕಾರ್ಯಕರ್ತ ಯೋಗೇಶ್ ಮಾಹಿತಿ ನೀಡಿದರು.

ಮಕ್ಕಳಿಗೆ ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಾವಿತ್ರಮ್ಮ, ಆರೋಗ್ಯ ಇಲಾಖೆ ಪರವಾಗಿ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಲ್ಕಿನ್ ಬಾನು ಮಾಹಿತಿ ನೀಡಿದರು.

ನಿಡ್ತ ಗ್ರಾ.ಪಂ. ಅಧ್ಯಕ್ಷ ಹೆಚ್.ಡಿ. ಮನು ಮತ್ತು ನಿಡ್ತ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ದೇವಂತ್ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ತಮ್ಮ ತಮ್ಮ ಶಾಲೆಯಲ್ಲಿರುವ ಸಮಸ್ಯೆ, ನ್ಯೂನ್ಯತೆ, ತಮ್ಮ ಗ್ರಾಮದಲ್ಲಿನ ಸಮಸ್ಯೆಗಳು ಸೇರಿದಂತೆ ಹಲವಾರು ಸಮಸ್ಯೆಗಳನ್ನು ವ್ಯಂಗ್ಯ ಮಿಶ್ರಿತವಾಗಿ ಪ್ರಶ್ನಿಸಿದ್ದು ಕಂಡುಬAದಿತು.

ಮುಳ್ಳೂರು ಸರಕಾರಿ ಶಾಲೆಯ ವಿದ್ಯಾರ್ಥಿ ಯುಗನ್ ನಮ್ಮೂರಿನ ರಸ್ತೆಯು ಹಾಳಾಗಿದ್ದು ರಸ್ತೆಯಲ್ಲಿ ಗುಂಡಿ ಇದಯೋ ಗುಂಡಿಯಲ್ಲಿ ರಸ್ತೆ ಇದೆಯೋ ಅಂತ ಗೊತ್ತಾಗುತ್ತಿಲ್ಲ, ರಸ್ತೆಯನ್ನು ದುರಸ್ಥಿಗೊಳಿಸಿ ಮತ್ತು ನಮ್ಮ ಶಾಲೆಯ ಬಳಿಯ ಚರಂಡಿಯಿAದ ಮಳೆಗಾಲದಲ್ಲಿ ಚರಂಡಿ ನೀರಿನಿಂದ ಕರ್ನಾಕದಲ್ಲಿರುವಂತಹ ಬಿಯರ್ ಬಾಟಲಿಗಳು ಮುಂತಾದ ತ್ಯಾಜ್ಯಗಳು ಹರಿದು ಬಂದು ಶಾಲಾ ಮುಂಭಾಗದಲ್ಲಿ ನಿಂತುಕೊಳ್ಳುತ್ತದೆ ಎಂದು ವ್ಯಂಗ್ಯ ಮಿಶ್ರಿತವಾಗಿ ಸಭೆಯ ಮುಂದಿಟ್ಟರು. ಇದರಿಂದ ಸಭೆಯಲ್ಲಿದ್ದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಕಕ್ಕಾಬಿಕ್ಕಿಯಾದರು.

ಗೋಪಾಲಪುರ ಸರಕಾರಿ ಶಾಲೆಯಲ್ಲಿ ರಾತ್ರಿ ಸಮಯದಲ್ಲಿ ಕುಡುಕರು ಶಾಲಾ ತಡಗೋಡೆ ಹಾರಿ ಶಾಲಾ ಆವರಣದಲ್ಲಿ ಬಾಟಲಿ, ಪ್ಲಾಸ್ಟಿಕ್ ಲೋಟ, ತ್ಯಾಜ್ಯಗಳನ್ನು ಬಿಸಾಕುತ್ತಾರೆ ಬೆಳಿಗ್ಗೆ ನಾವು ಇದನ್ನು ಸ್ವಚ್ಛಗೊಳಿಸಬೇಕಾಗುತ್ತದೆ ಎಂದು ಅಲ್ಲಿನ ವಿದ್ಯಾರ್ಥಿನಿಯೊಬ್ಬಳು ಸಮಸ್ಯೆ ಹೇಳಿಕೊಂಡಳು. ನಿಡ್ತ ಪ್ರೌಢಶಾಲೆಯೊಳಗಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ವಿದ್ಯಾರ್ಥಿಗಳು ಹೇಳಿಕೊಂಡರು. ಶಾಲೆಗೆ ಹೆಚ್ಚುವರಿಯಾಗಿ ತಡೆಗೋಡೆ ನಿರ್ಮಿಸುವುದು, ಶೌಚಾಲಯ ಸಮಸ್ಯೆ, ಶಾಲಾ ಮೈದಾನದಲ್ಲಿ ಜಾನುವಾರುಗಳನ್ನು ಬಿಡುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವುದು, ಶಾಲಾ ವಿದ್ಯಾರ್ಥಿಗಳಿಗೆ ಟ್ರಾö್ಯಕ್‌ಸೂಟ್ ಕೊಡುವಂತೆ ಇನ್ನು ಮುಂತಾದ ಸಮಸ್ಯೆಗಳಿಗೆ ಸ್ಪಂದಿಸುವAತೆ ವಿದ್ಯಾರ್ಥಿಗಳು ಸಭೆಯಲ್ಲಿ ಮನವಿ ಮಾಡಿಕೊಂಡರು. ಸಭೆಯಲ್ಲಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದ ಪಿಡಿಓ ಮಾನಸ ಗ್ರಾ.ಪಂ.ಯಿAದ ಆಗುವ ಕೆಲಸಗಳನ್ನು ನಾವು ಮಾಡಿಕೊಡುತ್ತೇವೆ ಉಳಿದ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.

ವೇದಿಕೆಯಲ್ಲಿ ವಿವಿಧ ಶಾಲೆಯ ಮಕ್ಕಳಾದ ನಿತಿನ್, ದೀಪಿತ, ಪ್ರೇಕ್ಷಿತ, ದೀಕ್ಷಾ, ಶೋಭಿತ, ಹರ್ಷಿಣಿ ಹಾಜರಿದ್ದರು. ಸಭೆಯಲ್ಲಿ ಗ್ರಾ.ಪಂ. ಸದಸ್ಯರು, ನಾವು ಪ್ರತಿಷ್ಠಾನ ಸಂಸ್ಥೆಯ ಸ್ಥಾಪಕ ಗೌತಮ್ ಕಿರಗಂದೂರು, ಕಾರ್ಯಕರ್ತ ಪ್ರಜ್ವಲ್, ಕುಮಾರಿ ಮುಂತಾದವರಿದ್ದರು.