ಪೊನ್ನAಪೇಟೆ, ಜ. ೧೦: ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವನೆ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ ಎಂದು ಲೆಫ್ಟಿನೆಂಟ್ ಡಾ. ಅಕ್ರಂ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಚೀನಿವಾಡ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ಮಕ್ಕಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಾಗಿದೆ.ಇಚ್ಛಾಶಕ್ತಿ, ಪ್ರೇರೇಪಿಸುವ ಕ್ರಿಯಾಶಕ್ತಿ, ಪಸರಿಸುವ ಹಾಗೂ ಜ್ಞಾನಶಕ್ತಿ ವೃದ್ಧಿಸುವ ಶಿಕ್ಷಕ ವೃಂದವೆ ನಿಜವಾದ ಹೀರೋಗಳು ಎಂದರು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಗ್ರಾಮದ ಹಿರಿಯ ಮುಖಂಡರಾದ ಸಾದಲಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಹೆತ್ತವರು ಬೋಧಿಸುವ ನೀತಿ, ರೀತಿ, ಶಿಸ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾವೇರಮ್ಮ, ಸರ್ಕಾರಿ ಶಾಲೆಗಳು ಇಂದು ಬಹಳಷ್ಟು ಅಭಿವೃದ್ಧಿಯಾಗಿದ್ದು ಉತ್ತಮ ಪ್ರತಿಭಾವಂತ ಶಿಕ್ಷಕರಿದ್ದು ಇದರಿಂದಾಗಿ ಗುಣಮಟ್ಟದ ಶಿಕ್ಷಣದೊಂದಿಗೆ ಬಹಳಷ್ಟು ಪ್ರತಿಭೆಗಳು ಹೊರಹೊಮ್ಮಲು ಕಾರಣವಾಗಿದೆ. ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವAತಹ ಬಹಳಷ್ಟು ಜನರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೆಂದರು.

ವಿಶೇಷ ಅಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದ ಹುದಿಕೇರಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನಕ್ಕೆ ಮೆರುಗು ಬರುವಂತದ್ದು. ಈ ನಿಟ್ಟಿನಲ್ಲಿ ಇಂತಹ ಶಾಲಾ ವಾರ್ಷಿಕೋತ್ಸವಗಳು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರಹೊಮ್ಮಲು ಪೂರಕವಾಗಿರುತ್ತದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಕಾಟ್ರಕೊಲ್ಲಿ ಜುಮ್ಮಾ ಮಸೀದಿ ತಕ್ಕ ಮುಖ್ಯಸ್ಥರಾದ ಆಲೀರ ಎರ್ಮು, ಪ್ರತಿ ಮಗು ಒಂದಲ್ಲ ಒಂದು ಪ್ರತಿಭೆಯನ್ನು ಪಡೆದುಕೊಂಡು ಈ ಜಗತ್ತಿಗೆ ಬಂದಿರುತ್ತದೆ. ಮಕ್ಕಳ ಪ್ರತಿಭೆಗಳನ್ನು ಶಿಕ್ಷಕರು ಗುರುತಿಸಿ ಅವುಗಳನ್ನು ಪ್ರದರ್ಶಿಸುವ ವೇದಿಕೆ ಈ ಶಾಲಾ ವಾರ್ಷಿಕೋತ್ಸವ ಎಂದರು. ಪೂರ್ವಾಹ್ನ ನಡೆದ ಕ್ರೀಡಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶೋಭ ವಹಿಸಿದ್ದರೆ, ಧ್ವಜಾ ರೋಹಣವನ್ನು ಪೊನ್ನಂಪೇಟೆ ಕೆ.ಪಿ.ಎಸ್.ಸಿ ಶಾಲೆಯ ಉಪಾಧ್ಯಕ್ಷ ಎಂ.ಎಸ್. ಕುಶಾಲಪ್ಪ ವಹಿಸಿದ್ದರೆ, ಉದ್ಘಾಟನೆಯನ್ನು ನಿವೃತ್ತ ಶಿಕ್ಷಕಿಯಾದ ರಾಧಾ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ "ಕೊಡಗಿನ ಉರ್ದು ಜಾನಪದ "ಎಂಬ ವಿಷಯದಲ್ಲಿ ಪಿ.ಹೆಚ್.ಡಿ ಪದವಿ ಪುರಸ್ಕೃತರಾದ ಲೆಫ್ಟಿನೆಂಟ್ ಡಾ.ಅಕ್ರಂ ಮತ್ತು ವಕೀಲ ಪದವಿ ಪೂರ್ಣಗೊಳಿಸಿದ ಶಬೀರ್ ಆಲಿ, ಹಿರಿಯ ಶಿಕ್ಷಕಿಯಾದ ಶಶಿಕಲಾ, ದಾನಿಗಳಾದ ಷಂಶುದ್ದೀನ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕಿ ಅನಿಸ್ ಫಾತಿಮ ಸ್ವಾಗತಿಸಿದರು. ಶಿಕ್ಷಕಿ ಖತೀಜಾ ನಿರೂಪಿಸಿದರು. ಬುಶ್ರಾ. ಕೆ.ಕೆ ವಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಜಿಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಚಿಂತನಾಕಾರರಾದ ಅಹಮ್ಮದ್ ಹಾಜಿ, ಶೆಟ್ಟಿಗೇರಿ ಕ್ಲಸ್ಟರಿನ ಸಿ.ಆರ್.ಪಿ ಸೌಮ್ಯ, ವಾರ್ಡ್ ಸದಸ್ಯರಾದ ಕಾವೇರಮ್ಮ, ಎ.ಪಿ. ಆಲಿ ಹಾಜರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.