ಸೋಮವಾರಪೇಟೆ, ಜ. ೧೦: ಸಮೀಪದ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶುಂಠಿ ಗ್ರಾಮದ ಎಸ್.ಬಿ. ಭರತ್ ಕುಮಾರ್ ಆಯ್ಕೆಯಾದರು.

ಸಹಕಾರ ಸಂಘದ ಉಪಾಧ್ಯಕ್ಷರಾಗಿ ಹೊನ್ನವಳ್ಳಿ ಗ್ರಾಮದ ರೇಖಾ ನೇಮಕಗೊಂಡರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಎಸ್.ಬಿ. ಭರತ್ ಕುಮಾರ್ ಹಾಗೂ ಹೆಚ್.ಆರ್. ಸುರೇಶ್, ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಮತ್ತು ಬಿ.ಪಿ. ಮೊಗಪ್ಪ ಅವರುಗಳು ನಾಮಪತ್ರ ಸಲ್ಲಿಸಿದ್ದರು. ನಂತರ ಚುನಾವಣೆ ನಡೆದು ೮-೫ ಮತಗಳ ಅಂತರದಿAದ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾದರು.

ಈ ಸಂದರ್ಭ ನಿರ್ದೇಶಕರು ಗಳಾದ ನವೀನ್ ಅಜ್ಜಳ್ಳಿ, ಹೂವಯ್ಯ ಮಾಸ್ಟರ್, ಶಿವಪ್ರಕಾಶ್, ನಾಗರಾಜು, ರಕ್ಷಿತ್, ಸುನೀತ, ದಿನೇಶ್, ಗಿರೀಶ್, ಜಿ.ಈ. ಸುರೇಶ್ ಅವರುಗಳು ಉಪಸ್ಥಿತರಿದ್ದರು. ಸಹಕಾರ ಸಂಘಗಳ ಸಹಾಯಕ ರಿಜಿಸ್ಟಾçರ್ ಸಂದೀಪ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

೧೩ ಸದಸ್ಯ ಬಲದ ಗೌಡಳ್ಳಿ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ಬೆಂಬಲಿತ ಸಿಂಡಿಕೇಟ್‌ನಿAದ ೮ ಹಾಗೂ ಕಾಂಗ್ರೆಸ್ ಬೆಂಬಲಿತ ಸಿಂಡಿಕೇಟ್‌ನಿAದ ೪, ಪಕ್ಷೇತರಾಗಿ ಓರ್ವರು ಜಯಗಳಿಸಿದ್ದರು.