ಕೂಡಿಗೆ, ಜ. ೧೦: ಹುಲುಸೆ ಫ್ರೇಂಡ್ಸ್ ಸಂಘದ ವತಿಯಿಂದ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟದಲ್ಲಿ ಟೀಮ್ ಮಂಜೇಶ್ ತಂಡವು ಪ್ರಥಮ ಸ್ಥಾನ ಪಡೆಯಿತು.

ದ್ವಿತೀಯ ಸ್ಥಾನವನ್ನು ರಾಯಲ್ ಫ್ರೆಂಡ್ಸ್ ತಂಡ ತನ್ನದಾಗಿಸಿಕೊಂಡಿತು. ತೃತೀಯ ಸ್ಥಾನ ಡಿ.ಎನ್. ಬ್ಲಾಸ್ಟರ್ ಹುಲುಸೆ, ಚತುರ್ಥ ಸ್ಥಾನವನ್ನು ಹಂಟರ್ ಈಗಲ್ ತಂಡವು ಪಡೆದುಕೊಂಡವು.

ಹುಲುಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ೮ ತಂಡಗಳು ಭಾಗವಹಿಸಿದ್ದವು.

ಈ ಸಂದರ್ಭ ಹುಲುಸೆ ಫ್ರೆಂಡ್ಸ್ನ ಪದಾಧಿಕಾರಿಗಳಾದ ದಿಲೀಪ್, ದರ್ಶನ್, ಗೌತಮ್, ಚಂದು, ಶಂಕರ್, ಅಭಿ, ನಾಗೇಂದ್ರ, ಶಿವು, ವಿವೇಕ್, ವರುಣ್, ಚಂದ್ರು ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.