ಕೂಡಿಗೆ, ಜ. ೧೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ-ಚಿಕ್ಕತ್ತೂರು ರಸ್ತೆಯ ಜಾಗದ ವಿವಾದಿತ ವಿಷಯಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖೆ ವತಿಯಿಂದ ಸರ್ವೇ ಕಾರ್ಯಕ್ಕೆ ದಿನ ನಿಗದಿಯಾಗಿತ್ತು. ಆದರೆ ಸಂಬAಧಿಸಿದ ಇಲಾಖೆಯವರು ತುರ್ತು ಸಭೆಯ ಹಿನ್ನೆಲೆಯಲ್ಲಿ ಬೇರೆಡೆಗೆ ತೆರಳಿದ ಕಾರಣ ಸರ್ವೆ ಕಾರ್ಯವನ್ನು ಮುಂದೂಡಲಾಗಿದೆ.
ಹಾರAಗಿ ಕುಶಾಲನಗರ ಮುಖ್ಯರಸ್ತೆಯ ಕಾಮಗಾರಿಗೆ ನೀರಾವರಿ ಇಲಾಖೆಯ ಮುಖೇನ ರೂ. ೧೦ ಕೋಟಿ ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ನಡೆದು ೫ ವರ್ಷಗಳು ಕಳೆದು ಈಗಾಗಲೇ ಶೇ. ೯೯ ರಷ್ಟು ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ ಚಿಕ್ಕತ್ತೂರು ಗ್ರಾಮದ ಸಮೀಪದಲ್ಲಿರುವ ರಸ್ತೆ ಜಾಗವು ಖಾಸಗಿ ವ್ಯಕ್ತಿಗೆ ಸೇರಿದ ರಸ್ತೆಯನ್ನು ಅಗೆದು ಗುಂಡಿ ಮಾಡಿದ ಪರಿಣಾಮವಾಗಿ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜು ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ನಿಗದಿಯಾದ ಸರ್ವೆ ಕಾರ್ಯ ನಡೆಸಲು ದಿನ ನಿಗದಿಯಾಗಿತ್ತು. ಆದರೆ, ಇದೀಗ ಮುಂದೂಡಿರುವ ಹಿನ್ನೆಲೆಯಲ್ಲಿ ಇಲಾಖೆಯ ನಿರ್ಲಕ್ಷö್ಯದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.