ಸಿದ್ದಾಪುರ, ಜ. ೧೦: ಗ್ರಾಮದ ತ್ಯಾಜ್ಯವನ್ನು ಖಾಸಗಿ ವ್ಯಕ್ತಿಯೋರ್ವರ ತೋಟದಲ್ಲಿ ವಿಲೇವಾರಿ ಮಾಡುವ ಮೂಲಕ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಹಾಗೂ ಕಾಡು ಪ್ರಾಣಿಗಳಿಗೆ ಕಂಟಕವಾಗುತ್ತಿದೆ.

ನೆಲ್ಲಿಹುದಿಕೇರಿ ಗ್ರಾಮದಲ್ಲಿ ಕಸದ ಸಮಸ್ಯೆಗೆ ಕಡಿವಾಣ ಹಾಕಲು ಗ್ರಾ.ಪಂ ಆಡಳಿತ ಮಂಡಳಿ ಶತಾಯಗತಾಯ ಪರಿಶ್ರಮ ಹಾಕುತ್ತಿದ್ದರೂ ಯಾವುದೂ ಫಲಪ್ರದವಾಗದೇ ಇರುವುದು ತಲೆನೋವಾಗಿ ಪರಿಣಮಿಸಿದೆ.

ನೆಲ್ಲಿಹುದಿಕೇರಿ ಗ್ರಾಮದ ನಲ್ವತ್ತೇಕರೆಯ ಖಾಸಗಿ ವ್ಯಕ್ತಿಯ ಕಾಫಿ ತೋಟದ ಬಳಿ ಗ್ರಾಮದ ತ್ಯಾಜ್ಯ ರಾಶಿಯಾಗಿ ಬಿದ್ದಿರುವುದು ಕಂಡುಬAದಿದೆ. ಪ್ಲಾಸ್ಟಿಕ್ ಪದಾರ್ಥಗಳು, ಗ್ರಾಮದ ಮನೆಗಳ ತ್ಯಾಜ್ಯಗಳು ವಿಲೇವಾರಿ ಮಾಡಿರುವ ಹಿನ್ನೆಲೆ ವ್ಯಾಪ್ತಿಯಲ್ಲಿ ತ್ಯಾಜ್ಯಗಳು ಕೊಳೆತು ದುರ್ವಾಸನೆಯಿಂದ ನಡೆದಾಡಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಾಣಿಗಳ ಸಗಣಿಯಲ್ಲಿ ಕಂಡುಬರುತ್ತಿರುವ ಪ್ಲಾಸ್ಟಿಕ್ : ಕಾಫಿ ತೋಟಗಳಲ್ಲಿ ವಿಲೇವಾರಿ ಮಾಡಲಾಗಿರುವ ತ್ಯಾಜ್ಯಗಳಲ್ಲಿ ಆಹಾರ ಪದಾರ್ಥಗಳು ಸಹಿತ ವಿಲೇವಾರಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳನ್ನು ಸೇವಿಸುವುದರೊಂದಿಗೆ ಪ್ಲಾಸ್ಟಿಕ್ ಚೀಲಗಳನ್ನು ಪ್ರಾಣಿಗಳು ನುಂಗುತ್ತಿರುವು ದರಿಂದ ಪ್ರಾಣಿಗಳ ಸಗಣಿಯಲ್ಲಿ ಪ್ಲಾಸ್ಟಿಕ್ ಪದಾರ್ಥಗಳು ಕಂಡುಬರುತ್ತಿವೆ.