ಮಡಿಕೇರಿ, ಜ. ೯: ಇಲ್ಲಿನ ಮಹದೇವಪೇಟೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ತಾ.೧೦ ರಂದು (ಇಂದು) ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ಮತ್ತು ಸೇವೆ ನಡೆಯಲಿದೆ. ಬೆಳಿಗ್ಗೆ ೧೧ ಗಂಟೆ ಒಳಗಡೆ ಭಕ್ತಾದಿಗಳು ಕ್ಷೀರಾಭಿಷೇಕ, ಎಳನೀರು ಅಭಿಷೇಕ ಮಾಡಿಸಬಹುದಾಗಿದೆ. ತುಳಸಿ ಅರ್ಚನೆ ಮತ್ತು ಕುಂಕುಮಾರ್ಚನೆ ಸೇವೆಗಳು ಬೆಳಿಗ್ಗೆ ಮತ್ತು ರಾತ್ರಿ ೮.೩೦ ಕ್ಕೆ ಮಾಡಿಸಬಹುದೆಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.