ಕಣಿವೆ, ಜ. ೯: ಅಖಿಲ ಭಾರತ ಯುನೈಟೆಡ್ ಕಿಸಾನ್ ಮಹಾ ಸಭಾದ ಕೊಡಗು ಸಮಿತಿಯ ವತಿಯಿಂದ ಕುಶಾಲನಗರದ ತಹಶೀಲ್ದಾರ್ ಕಚೇರಿ ಬಳಿ ರೈತರು ಹಾಗೂ ಜನಸಾಮಾನ್ಯರ ಹಿತಾಸಕ್ತಿಗಾಗಿ ಸರ್ಕಾರಗಳನ್ನು ಒತ್ತಾಯಿಸಲು ‘ಹಕ್ಕೊತ್ತಾಯ ದಿನ’ ಆಚರಿಸಲಾಯಿತು.
ಕಿಸಾನ್ ಮಹಾ ಸಭಾದ ಕೇಂದ್ರ ಸಮಿತಿ ವತಿಯಿಂದ ನಡೆದ ಹಕ್ಕೊತ್ತಾಯದಲ್ಲಿ ಘೋಷಣೆಗಳನ್ನು ಕೂಗಲಾಯಿತು. ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆಯ ಕಾನೂನು ಖಾತರಿ ಒದಗಿಸಬೇಕು.ಕೃಷಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ೨೦೦೬ ರ ಅರಣ್ಯ ಹಕ್ಕು ಕಾಯಿದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು.
ಮನೆಯಿಲ್ಲದ ಭೂರಹಿತರಿಗೆ ಭೂಮಿ, ಹಸಿದವರಿಗೆ ಆಹಾರ, ಮನೆಯಿಲ್ಲದವರಿಗೆ ಮನೆ ಹಾಗೂ ಉದ್ಯೋಗಗಳನ್ನು ನೀಡಬೇಕೆಂಬ ಹಕ್ಕೊತ್ತಾಯಗಳ ಮನವಿ ಪತ್ರವನ್ನು ರಾಷ್ಟçಪತಿಗಳಿಗೆ ತಹಶೀಲ್ದಾರ್ ಕಿರಣ್ ಗೌರಯ್ಯ ಮೂಲಕ ಸಲ್ಲಿಸಿದರು.
ಈ ಸಂದರ್ಭ ಕಿಸಾನ್ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ಜೆ.ಪ್ರಕಾಶ್, ಪ್ರಮುಖರಾದ ಸಣ್ಣಪ್ಪ, ಸಾವಿತ್ರಮ್ಮ, ಜವರಯ್ಯ, ಹೆಚ್.ಬಿ.ರಾಜು, ಚಿಣ್ಣಪ್ಪ, ಮಂಜು ಮೊದಲಾದವರಿದ್ದರು.