ಮಡಿಕೇರಿ, ಜ. ೯: ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ ರಾಜ್ಯ ಮಟ್ಟದ ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮಡಿಕೇರಿಯ ಕಲಾ ಕಾವ್ಯ ನಾಟ್ಯ ಶಾಲೆಯ ವಿದ್ಯಾರ್ಥಿನಿ ಮಂಡಿರ ಯುಕ್ತಾ ನೀಲಮ್ಮ ಶೇ.೯೧ ಅಂಕಗಳಿಸಿ ಕೊಡಗು ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾಳೆ.

ಮಂಡಿರ ಯುಕ್ತ ನೀಲಮ್ಮ ಕಳೆದ ಎಂಟು ವರ್ಷಗಳಿಂದ ಕಲಾ ಕಾವ್ಯ ನಾಟ್ಯ ಶಾಲೆಯ ವಿದುಷಿ ಕಾವ್ಯಶ್ರೀ ಕಪಿಲ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ.

ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ೧೦ನೇ ತರಗತಿ ವ್ಯಾಸಂಗ ಮಾಡುತ್ತಿರುವ ಯುಕ್ತಾ ನೀಲಮ್ಮ ಮಡಿಕೇರಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಮಂಡಿರ ಸದಾ ಮುದ್ದಪ್ಪ ಹಾಗೂ ಕೃಪಾ ಮುದ್ದಪ್ಪ ದಂಪತಿಯ ಪುತ್ರಿ. ಪರೀಕ್ಷೆಯಲ್ಲಿ ಪಾಲ್ಗೊಂಡ ಕಲಾಕಾವ್ಯ ನಾಟ್ಯಶಾಲೆಯ ವಿದ್ಯಾರ್ಥಿಗಳಾದ ಯುಕ್ತಾ ೩೬೫ (ಶೇ.೯೧), ಇಂಚರ ೩೪೩ (ಶೇ.೮೫), ಸಿಂಧು ೩೩೭ (ಶೇ.೮೪), ಅನೂಹ್ಯ ೩೩೦ (ಶೇ.೮೨), ಬೆಳಕು ೩೦೨ (ಶೇ.೭೫), ಯಶಿಕಾ ೨೭೯ (ಶೇ.೬೯) ಅಂಕದೊAದಿಗೆ ಉತ್ತೀರ್ಣರಾಗಿದ್ದಾರೆ.