ವೀರಾಜಪೇಟೆ, ಜ. ೮: ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆ ಹಾಗು ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸೌಹಾರ್ದ ಸಹಕಾರಿ ದಿನಾಚರಣೆಯ ಅಂಗವಾಗಿ ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್‌ಗೆ ರಾಜ್ಯ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಇವರುಗಳ ಜಂಟಿ ಆಶ್ರಯದಲ್ಲಿ ಬೆಳ್ಳಿಹಬ್ಬದ ವರ್ಷ ಪ್ರಯುಕ್ತ ಬ್ರಹ್ಮಾವರ ತಾಲೂಕು ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆದ ಸೌಹಾರ್ದ ಸಹಕಾರಿ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸಹಕಾರಿ ಚಳವಳಿಯ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಸೇವೆ ಹಾಗು ಸೌಹಾರ್ದ ಸಹಕಾರಿ ಉತ್ತಮ ಕೊಡುಗೆಯನ್ನು ನೀಡಿರುವ ಸಲುವಾಗಿ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಪರವಾಗಿ ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷ ನೆಲ್ಲಮಕ್ಕಡ ಮುತ್ತಣ್ಣ ಅವರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಎಸ್.ಕೆ. ಮಂಜುನಾಥ್, ಭಾರತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ ನೆಲ್ಲಮಕ್ಕಡ ಮುತ್ತಣ್ಣ ಮಾತನಾಡಿ, ಸಂಸ್ಥೆ ಪ್ರಾರಂಭಗೊAಡು ಐದು ವರ್ಷಕ್ಕೆ
(ಮೊದಲ ಪುಟದಿಂದ) ಪದಾರ್ಪಣೆ ಮಾಡುತ್ತಿದ್ದು ಸದಸ್ಯರುಗಳು, ಸಹಕಾರಿಗಳು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರಕುತ್ತಿದೆ.
ಶೇ. ೧೦೦ರಷ್ಟು ಸಾಲ ವಸೂಲಾತಿ ಆಗಿದ್ದು ಆರ್ಥಿಕ ವ್ಯವಹಾರಗಳು ಪ್ರಗತಿಯಲ್ಲಿ ಸಾಗುತ್ತಿದೆ. ಸಂಸ್ಥೆಗೆ ಸ್ವಂತ ಕಟ್ಟಡ ಇಲ್ಲದ ಕಾರಣ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನಿರ್ದೇಶಕರುಗಳಾದ ನೆಲ್ಲಮಕ್ಕಡ ಸಿ. ಬೆಳ್ಯಪ್ಪ, ನೆಲ್ಲಚಂಡ. ಎಂ.ಭೀಮಯ್ಯ, ವಾಂಚಿರ ಟಿ. ನಾಣಯ್ಯ, ಚೇಂದ್ರಿಮಾಡ ಕೆ. ನಂಜಪ್ಪ, ಕೇಳಪಂಡ ಎನ್. ವಿಶ್ವನಾಥ್, ಕೊಂಗAಡ ಎ.ನಾಣಯ್ಯ, ಕಾಳೇಂಗಡ ಬಿ. ತಿಮ್ಮಯ್ಯ, ಮೇಕೇರಿರ ಪಾಲಿ ಸುಬ್ರಮಣಿ,
ಪಟ್ಟಡ ವಿ. ದಿವ್ಯ, ಬೊಳ್ಳೆಪಂಡ
ಎಂ ಸುರೇಶ್, ಐನಂಡ ಪಿ.
ಗಣಪತಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಟ್ಟಡ ಸಿ. ಟೀನಾ, ಪವನ್ ಉಪಸ್ಥಿತರಿದ್ದರು.