ಚೆಟ್ಟಳ್ಳಿ, ಜ. ೮: ಇತ್ತೀಚೆಗೆ ಮಡಿಕೇರಿ ಸಮೀಪದ ಕೆದಕಲ್ ಬಳಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ಚೆಟ್ಟಳ್ಳಿಯ ಈರಳೆವಳಮುಡಿ ಗ್ರಾಮದ ಬಲ್ಲಾರಂಡ ಹರೀಶ್ ತಮ್ಮಯ್ಯ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈರಳೆವಳಮುಡಿ ಗ್ರಾಮದ ರಸ್ತೆಗಳು ತೀರಾ ಹಾಳಾದ ಬಗ್ಗೆ ಮಾತನಾಡಿ, ಮುಂದಿನ ಅನುದಾನದಲ್ಲಿ ಈರಳೆವಳಮುಡಿ ಗ್ರಾಮದ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ಶಾಸಕರು ಭರವಸೆ ನೀಡಿದರು.