ಕೂಡಿಗೆ, ಜ. ೮: ಕೂಡಿಗೆ ಪವಿತ್ರ ಕುಟುಂಬ ದೇವಾಲಯದ ವಾರ್ಷಿಕೋತ್ಸವು ಶ್ರದ್ಧಾಭಕ್ತಿಯಿಂದ ನಡೆಯಿತು. ವಾರ್ಷಿಕೋತ್ಸವ ಅಂಗವಾಗಿ ಪವಿತ್ರ ಕುಟುಂಬ ದೇವಾಲಯದಲ್ಲಿ ಆಡಂಬರ ಬಲಿಪೂಜೆಯು ಮಡಿಕೇರಿ ಧರ್ಮ ಕೇಂದ್ರದ ಹಾಗೂ ವಲಯ ಶ್ರೇಷ್ಠ ಗುರುಗಳಾದ ದೀಪಕ್ ಜಾರ್ಜ್ ಹಾಗೂ ಕೂಡಿಗೆ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ಚಾರ್ಲ್ಸ್ ನೊರೋನ್ಹ ಅವರ ನೇತೃತ್ವದಲ್ಲಿ ನೆರವೇರಿತು.

ನಂತರ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಪವಿತ್ರ ಕುಟುಂಬ ದೇವಾಲಯದ ವಿಗ್ರಹವನ್ನು ಕುಳ್ಳಿರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಜಿಲ್ಲೆಯ ಎಲ್ಲಾ ಧರ್ಮ ಕೇಂದ್ರದ ಗುರುಗಳು ಮತ್ತು ಸಿಸ್ಟರ್‌ಗಳು ಭಾಗವಹಿಸಿದರು. ವಾರ್ಷಿಕೋತ್ಸವದಲ್ಲಿ ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರೆöÊಸ್ತ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿAದ ನಡೆಸಿದರು. ಪವಿತ್ರ ದೇವಾಲಯವು ಅತ್ಯಾಕರ್ಷಕ ವಿದ್ಯುತ್ ದೀಪಗಳಿಂದ ಅಲಂಕೃತಗೊAಡಿತ್ತು.

ಈ ಸಂದರ್ಭ ಕುಶಾಲನಗರ ತಾಲೂಕು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎ. ಪೀಟರ್ ಸೇರಿದಂತೆ ದೇವಾಲಯದ ಪ್ರಮುಖರಾದ ಅಂತೋಣಿ, ವಿನ್ಸೆಂಟ್, ರಾಚಾಪ್ಪ, ಪಿ.ಎಂ. ಆಂಟೊನಿ, ಬೀಜೋ, ಸಾಜೂ, ರಾಬಿನ್, ಜೋಸ್ ಮಾರ್ಕರ್, ಥಾಮಸ್, ಜಾನ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆ ಫಿಲೋಮಿನಾ ಸೇರಿದಂತೆ ಸಮುದಾಯದ ಪ್ರಮುಖರು ಭಾಗವಹಿಸಿದ್ದರು. ವಾರ್ಷಿಕೋತ್ಸವ ಅಂಗವಾಗಿ ಸಮುದಾಯದ ಶಾಲಾ-ಕಾಲೇಜುಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.