ವೀರಾಜಪೇಟೆ, ನ. ೩೦: ಸಿದ್ದಾಪುರ-ವೀರಾಜಪೇಟೆ ಮಾರ್ಗವಾಗಿ ಮತ್ತು ಪೆರಂಬಾಡಿ ಜಂಕ್ಷನ್‌ನಿAದ ಮಾಕುಟ್ಟ ಮಾರ್ಗವಾಗಿ ರೂ. ೧೩ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣ್ಣಚ್ಚ, ವೀರಾಜಪೇಟೆ ಪುರಸಭೆ ಸದಸ್ಯರಾದ ಪ್ರಥ್ವಿನಾಥ್, ಮಹಮ್ಮದ್ ರಾಫಿ, ನಾಮ ನಿರ್ದೇಶನ ಸದಸ್ಯರು, ಕಾಂಗ್ರೆಸ್ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.