ಕಣಿವೆ, ನ. ೩೦: ಮನುಷ್ಯನ ಬದುಕಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಇತಿಹಾಸದ ಎಷ್ಟೋ ಸಂಗತಿಗಳನ್ನು ಒಳಗೊಂಡ ಸಮಷ್ಟಿ ಪ್ರಜ್ಞೆಯ ಸೃಷ್ಟಿಯೇ ಜನಪದ.

ಅದರಲ್ಲಿನ ವಿವೇಕಯುತ ಚಿಂತನೆಗಳು ನಮ್ಮ ನಾಡಿನ ಪರಂಪರೆಯನ್ನು ಶ್ರೀಮಂತಗೊಳಿಸಿವೆ ಎಂದು ಕೊಡಗು ವಿವಿ ಕುಲಪತಿ ಡಾ. ಅಶೋಕ್ ಸಂಗಪ್ಪ ಆಲೂರ ಹೇಳಿದರು.

ಕನ್ನಡ ಜಾನಪದ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಗೀತೋತ್ಸವ ಕಾರ್ಯಕ್ರಮವನ್ನು ಕೊಡಗಿನ ಪಾರಂಪರಿಕ ಕಲೆಯಾದ "ದುಡಿ"ಯನ್ನು ಬಾರಿಸುವ ಮೂಲಕ ಉದ್ಘಾಟಿಸಿದ ಅವರು, ಪೂರ್ವಜರು ಜತನದಿಂದ ಸಂರಕ್ಷಿಸಿಕೊAಡು ಬಂದಿರುವ ಜಾನಪದವನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಒಯ್ಯಬೇಕಿದೆ.

ಜಾನಪದ ಎಂಬುದು ವಾಸ್ತವಿಕ ಆಧಾರಗಳ ಮೇಲೆ ನಿಲ್ಲಬಲ್ಲ ವಿಜ್ಞಾನವಾಗಿದ್ದು, ಕಲೆಯ ಜೊತೆಗೆ ಶಾಸ್ತಿçÃಯ ಮುಖವನ್ನು ಸಹ ಒಳಗೊಂಡಿದೆ. ಕಲೆಯ ಜೊತೆಗೆ ಶಾಸ್ತಿçÃಯವಾಗಿರುವ ಜಾನಪದವನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.

ಮನುಷ್ಯನ ಬದುಕನ್ನು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಜನಪದ ಮನುಷ್ಯನ ಆತ್ಮದೊಳಗೆ ಇರುವ ಬಹು ದೊಡ್ಡ ಕಲಾ ಪ್ರಾಕಾರವಾಗಿದೆ ಎಂದು ಹೇಳಿದರು.

ಜಾನಪದದಲ್ಲಿ ಕಂಸಾಳೆ, ವೀರಗಾಸೆ, ಡೊಳ್ಳುಕುಣಿತ, ಯಕ್ಷಗಾನ, ದುಡಿ, ಕೋಲಾಟ ಮೊದಲಾದ ಜಾನಪದ ಕಲೆಗಳು ವೈವಿಧ್ಯ ಮಯವಾಗಿ ಹಾಸು ಹೊಕ್ಕಾಗಿವೆ.

ಬೀಸುವ ಕಲ್ಲು, ಕುಟ್ಟುವ ಒನಕೆ, ಕೇರುವ ಮರ ಮೊದಲಾದ ಜಾನಪದ ಸಂಸ್ಕೃತಿಗಳನ್ನು ನಶಿಸಲು ಬಿಡದೇ ಪೀಳಿಗೆಯಿಂದ ಪೀಳಿಗೆಗೆ ಸಂರಕ್ಷಿಸಿ ಕೊಂಡು ಹೋಗಬೇಕಾದ ಮಹತ್ವದ ಜವಬ್ದಾರಿ ನಮ್ಮೆಲ್ಲರದ್ದಾಗಬೇಕೆಂದು ಕರೆ ಕೊಟ್ಟರು.

ಬೆಂಗಳೂರಿನ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪದ್ಮಶೇಖರ್ ಮಾತನಾಡಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬAಧವನ್ನು ಹೊಂದುವ ಮೂಲಕ ತಲೆಮಾರು ಗಳಿಂದ ಬಂದಿರುವ ಹಾಗೂ ಪರಂಪರೆಯಲ್ಲಿ ಬೆಸೆದು ಹೋಗಿರುವ ಜಾನಪದ ಅಕ್ಷರಸ್ಥರಿಗಿಂತ ಅನಕ್ಷರಸ್ಥರಿಂದಲೇ ಬೆಳೆದಿದೆ.

ಯಾವುದೇ ಅಧಿಕಾರದ, ಸಂಪ್ರದಾಯದ ಪೋಷಣೆಯಿಲ್ಲದೇ ತನ್ನಿಂದ ತಾನೇ ಹರಿದು ಬಂದು ಮಣ್ಣಿನ ಸಂಸ್ಕೃತಿಯ ಸಾರವಾಗಿರುವ ಜನಪದವನ್ನು ಮಕ್ಕಳಾದಿಯಾಗಿ ಎಲ್ಲರೂ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು.

ಕೊಡಗು ವಿವಿ ಕುಲಸಚಿವ ಡಾ. ಎಂ. ಸುರೇಶ್ ಅಲೆಟ್ಟಿ, ಮೈಸೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಎಂಬುದು ಎಲ್ಲಾ ಸಂಸ್ಕೃತಿಗಳ ತಾಯಿ ಬೇರು ಎಂದರು.

ಜಾಗತೀಕರಣದ ಪ್ರಭಾವದಿಂದ ನಶಿಸುತ್ತಿರುವ ಜನಪದ ಕಲೆ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿ ಸಂರಕ್ಷಿಸಬೇಕೆAದರು.

ಕೊಡಗು ವಿವಿ ನಿಕಟಪೂರ್ವ ಕುಲಸಚಿವ ಡಾ. ಸೀನಪ್ಪ, ಕೊಡಗು ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷೆಯೂ ಆದ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್, ಮೈಸೂರು ಜಿಲ್ಲಾ ಕಜಾಪ ಅಧ್ಯಕ್ಷರಾದ ಡಾ. ರಾಣಿಪ್ರಭಾ, ಡಾ. ರವಿಶಂಕರ್ ಇದ್ದರು.

ಕಾರ್ಯಕ್ರಮದಲ್ಲಿ ಡಾ. ಪದ್ಮಶೇಖರ್, ಜಾನಪದ ಕಲಾ ಸಾಧಕರಾದ ಕುಡಿಯರ ದೇವಕಿ, ಸುಳ್ಳಿಮಾಡ ಗೌರಿ ನಂಜಪ್ಪ ಹಾಗೂ ಕೊಡಗು ವಿವಿ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಜೀವ್ ಹಾಗೂ ವಿದ್ಯಾಶ್ರೀ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ಹೆಸರಾಂತ ಜಾನಪದ ಗಾಯಕರಾದ ಅಮ್ಮ ರಾಮಚಂದ್ರ, ಯರಗನಹಳ್ಳಿ ಶ್ರೀಧರ್ ಅವರಿಂದ ಗೀತೋತ್ಸವ ನಡೆಯಿತು. ಕೊಡಗು ವಿವಿ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ನಿರೂಪಿಸಿದರು. ಪ್ರಾಧ್ಯಾಪಕಿ ಡಾ. ಐ.ಕೆ. ಮಂಜುಳಾ ಸ್ವಾಗತಿಸಿದರು.