ಗೋಣಿಕೊಪ್ಪಲು, ನ. ೩೦: ಕಳೆದ ೨ ದಶಕಗಳಿಂದ ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಂಘದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಗ್ನಿಶಾಮಕ ದಳದ ಠಾಣೆಯು ಇದೀಗ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊAಡಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಅಗ್ನಿ ಅನಾಹುತಗಳು ಸಂಭವಿಸಿದ ವೇಳೆ ದೂರದ ಮಡಿಕೇರಿ ಹಾಗೂ ಪಿರಿಯಾಪಟ್ಟಣ ಅಗ್ನಿ ಶಾಮಕ ದಳದ ವಾಹನಗಳು ಗೋಣಿಕೊಪ್ಪ ಸೇರಿದಂತೆ ದ.ಕೊಡಗಿನ ಭಾಗಕ್ಕೆ ಆಗಮಿಸಬೇಕಾಗಿತ್ತು. ಇಂತಹ ಸಂದರ್ಭಗಳಲ್ಲಿ ವಾಹನಗಳು ದೂರದಿಂದ ಬರುವ ಸಮಯದೊಳಗೆ ಬಹಳಷ್ಟು ನಷ್ಟ ಸಂಭವಿಸುತ್ತಿದ್ದವು. ಇದನ್ನು ಮನಗಂಡ ಅಂದಿನ ವಿಧಾನ ಪರಿಷತ್ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯನವರು ತಮ್ಮ ವಿಶೇಷ ಆಸಕ್ತಿ ವಹಿಸಿ ಸರ್ಕಾರದ ವತಿಯಿಂದ ಅಗ್ನಿಶಾಮಕ ದಳ ಠಾಣೆಯನ್ನು ಮಂಜೂರು ಮಾಡಿಸಲು ವಿಶೇಷ ಪ್ರಯತ್ನ ನಡೆಸಿದ್ದರು. ಇವರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಗೋಣಿಕೊಪ್ಪಕ್ಕೆ ಅಗ್ನಿಶಾಮಕ ದಳ ಠಾಣೆಯನ್ನು ಮಂಜೂರು ಮಾಡಿತ್ತು.
ಅಗ್ನಿಶಾಮಕ ದಳದ ಠಾಣೆಯು ಗೋಣಿಕೊಪ್ಪ ನಗರಕ್ಕೆ ಮಂಜೂರಾಗುತ್ತಿದ್ದAತೆಯೇ ಸ್ಥಳದ ಆಭಾವ ಎದುರಾಗಿತ್ತು. ಈ ವೇಳೆ ಅಂದಿನ ವಿಧಾನ ಪರಿಷತ್ ಸದಸ್ಯರಾಗಿದ್ದ ಚೆಪ್ಪುಡೀರ ಅರುಣ್ ಮಾಚಯ್ಯ ನಗರದ ಕಿತ್ತಳೆ ಬೆಳೆಗಾರÀರಾದ ಸಂಘದ ಆವರಣದಲ್ಲಿ ಇದಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಿದ್ದರು. ಠಾಣಾಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗಾಗಿ ವಸತಿ ಗೃಹವನ್ನು ನೀಡಿದ್ದರು. ಇದೇ ಜಾಗದಲ್ಲಿ ಅನೇಕ ವರ್ಷಗಳು ಅಗ್ನಿಶಾಮಕ ದಳ ಠಾಣೆಯು ಕಾರ್ಯನಿರ್ವಹಿಸುತ್ತಿತ್ತು.
ಅಗ್ನಿಶಾಮಕ ದಳದ ಠಾಣೆಗೆ ಶಾಶ್ವತ ಕಟ್ಟಡ ನಿರ್ಮಿಸುವ ಸಲುವಾಗಿ ಸರ್ಕಾರ ತೀರ್ಮಾನಿಸಲಾಗಿತ್ತು. ಈ ವೇಳೆ ಕ್ಷೇತ್ರದ ಶಾಸಕರಾಗಿದ್ದ ಕೆ.ಜಿ. ಬೋಪಯ್ಯನವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಮನವೊಲಿಸುವ ಮೂಲಕ ಗೋಣಿಕೊಪ್ಪ ನಗರದ ಹರಿಶ್ಚಂದ್ರ ಬಳಿಯ ಕೃಷಿ ಉತ್ಪನ್ನ ಸಮಿತಿಯ ಆವರಣದಲ್ಲಿ ೫೦ ಸೆಂಟ್ ಜಾಗವನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಮಂಜೂರಾದ ಸ್ಥಳದಲ್ಲಿ ಇದೀಗ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದ್ದು ಪ್ರಸ್ತುತ ಕಿತ್ತಳೆ ಬೆಳೆಗಾರರ ಸಂಘದ ಆವರಣದಲ್ಲಿರುವ ಕರ್ತವ್ಯ ನಿರ್ವಹಿಸುತ್ತಿದ್ದ ಅಗ್ನಿಶಾಮಕ ದಳದ ವಾಹನಗಳು ಹಾಗೂ ಸಿಬ್ಬಂದಿಗಳು ನೂತನ ಠಾಣೆಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಗೊAಡಿದ್ದಾರೆ.
ನೂತನ ಕಟ್ಟಡ ಲೋಕಾರ್ಪಣೆಗೆ ಆಗಮಿಸಿದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಗೌರವ ವಂದನೆ ನೀಡುವ ಮೂಲಕ ನೂತನ ಕಚೇರಿಗೆ ಬರಮಾಡಿಕೊಂಡರು.
ಅಗ್ನಿಶಾಮಕ ದಳದ ಠಾಣೆಯಲ್ಲಿ ಓರ್ವ ಅಗ್ನಿಶಾಮಕ ಠಾಣಾಧಿಕಾರಿ, ಓರ್ವ ಸಹಾಯಕ ಠಾಣಾಧಿಕಾರಿ, ಲೀಡಿಂಗ್ ಫಯರ್ ಮ್ಯಾನ್, ೪ ಪ್ರಮುಖ ಅಗ್ನಿ ಶಾಮಕ ಸಿಬ್ಬಂದಿ. ಓರ್ವ ಚಾಲಕ ಹಾಗೂ ಮೆಕಾನಿಕ್, ೪ ಚಾಲಕರುಗಳು, ೧೨ ಅಗ್ನಿಶಾಮಕ ದಳದವರು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಈ ವೇಳೆ ಮೈಸೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್. ಜಯರಾಮಯ್ಯ, ವಲಯ ಅಧಿಕಾರಿ ಪಿ. ಚಂದನ್, ಕೊಡಗು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಜಿ. ರಾಜೇಶ್, ಅಗ್ನಿಶಾಮಕ ಠಾಣಾಧಿಕಾರಿ ಡಿ.ಜೆ. ಮಂಜೇಗೌಡ, ಇತರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಕೆ.ಪಿ. ನವೀನ್‌ಕುಮಾರ್, ಕೆ.ಪಿ. ಗುರುರಾಜ್, ಕೆ.ಸಿ. ರಮೇಶ್, ಜೆ. ಗಂಗಾನಾಯಕ್, ಜಿ. ರಾಘವೇಂದ್ರ, ಠಾಣಾಧಿಕಾರಿಗಳಾದ ಪಿ.ಕೆ. ಶೋಭಿತ್, ಸಂತೋಷ್, ಅಜಯ್‌ಕುಮಾರ್, ಅಧಿಕಾರಿಗಳಾದ ಯಾದವ್, ಶಿವಪ್ರಕಾಶ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮಿದೇರಿರ ನವೀನ್ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.