ಮಡಿಕೇರಿ, ನ. ೩೦: ಹೊದ್ದೂರುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವತಿಯಿಂದ ಆರಂಭಗೊAಡಿರುವ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿ ಸ್ಥಳಕ್ಕೆ ಮಾಜಿ ಕ್ರಿಕೆಟಿಗ ಬಿಸಿಸಿಐ ಹಾಗೂ ಕೆಎಸ್‌ಸಿಎ ಪ್ರಮುಖರಲ್ಲಿ ಒಬ್ಬರಾಗಿರುವ ಬ್ರಿಜೇಶ್ ಪಟೇಲ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸ್ಟೇಡಿಯಂ ನಿರ್ಮಾಣಕ್ಕೆ ಎದುರಾಗಿದ್ದ ಹಲವು ಅಡೆ - ತಡೆಗಳೆಲ್ಲ ಇದೀಗ ನಿವಾರಣೆ ಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಬ್ರಿಜೇಶ್ ಅವರು ಕಾಮಗಾರಿಯ ಕುರಿತಾಗಿ ಕೆಎಸ್‌ಸಿಎ ಜಿಲ್ಲಾ ಸಂಯೋಜಕರಾದ ಚೇನಂಡ ಪೃಥ್ವಿ ದೇವಯ್ಯ ಅವರೊಂದಿಗೆ ಚರ್ಚಿಸಿ ಕೆಲವು ಅಗತ್ಯ ಸಲಹೆಗಳನ್ನು ನೀಡಿದರು.
ತರಬೇತಿಗೆ ಅನುಕೂಲವಾಗು ವಂತೆ ಒಳಾಂಗಣ ಕ್ರೀಡೆಗಳು, ಜಿಮ್ ಮತ್ತಿತರ ಅಗತ್ಯತೆಗಳ ಜತೆಗೆ ಮೈದಾನದ ಒಂದು ಭಾಗದಲ್ಲಿ ಫುಟ್ಬಾಲ್ ಹಾಗೂ ಹಾಕಿ ಆಟಕ್ಕೂ ಅವಕಾಶವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಲು ಅವರು
ಈ ಸಂದರ್ಭ ಸೂಚಿಸಿದರು.
ಯುವ ಪ್ರತಿಭೆಗಳಿಗೆ ಇದೂ ಅನುಕೂಲಕರವಾಗಲಿದೆ ಎಂದು ಅವರು ಸಲಹೆಯಿತ್ತಿದ್ದಾರೆ.
ಈ ಬಗ್ಗೆಯೂ ಕ್ರಮ ವಹಿಸಲಾಗುತ್ತದೆ ಎಂದು ಪೃಥ್ವಿ ದೇವಯ್ಯ ತಿಳಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದರು.