*ಸಿದ್ದಾಪುರ, ನ. ೨೪: ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ರಿ) ಎಸ್‌ಜೆಎಮ್ ಪಾಲಿಬೆಟ್ಟ ರೇಂಜ್ ಸಮಿತಿಯ ಪ್ರತಿಭಾ ಸಂಗಮ ತಾ. ೧೪ ರಂದು ಮಾಲ್ದಾರೆ ನೂರುಲ್ ಈಮಾನ್ ಮದ್ರಸಾ ವಠಾರದಲ್ಲಿ ಖುರ್ರತುಸ್ಸಾದಾತ್ ನಗರಿಯಲ್ಲಿ ಜರುಗಿತು. ಮಾಲ್ದಾರೆ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಸಿ.ಎಂ ಮೊಯ್ದೀನ್ ಧ್ವಜಾರೋಹಣಗೈದರು.

ಸಮಿತಿ ಚೇರ್ಮಾನ್ ಝುಬೈರ್ ಸಅದಿ ಅಲ್ ಅಫ್ಳಲಿ ರವರ ಅಧ್ಯಕ್ಷತೆಯಲ್ಲಿ ರೇಂಜ್ ಸಮಿತಿ ಅಧ್ಯಕ್ಷ ನೌಷಾದ್ ಝುಹ್‌ರಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ಜೆಎಮ್ ಕೊಡಗು ಜಿಲ್ಲಾ ಕಾರ್ಯದರ್ಶಿ ಝೈನುದ್ದೀನ್ ಮುಸ್ಲಿಯಾರ್, ಮಾಲ್ದಾರೆ ಜುಮಾ ಮಸ್ಜಿದ್ ಆಡಳಿತ ಸಮಿತಿ ಉಪಾಧ್ಯಕ್ಷರುಗಳಾದ ಅಬೂಬಕರ್ ಮದನಿ, ಅಝೀಝ್ ಮುಸ್ಲಿಯಾರ್ ಶುಭ ಹಾರೈಸಿದರು. ಪ್ರೋಗ್ರಾಂ ಸಮಿತಿ ಜನರಲ್ ಕನ್ವೀನರ್ ಹುಸೈನ್ ಖಾದಿರಿ ಸ್ವಾಗತಿಸಿ ಕನ್ವೀನರ್ ರಫೀಖ್ ಸಅದಿ ವಂದಿಸಿದರು.

ರೇAಜ್ ವ್ಯಾಪ್ತಿಯ ೧೫ ಮದ್ರಸಾಗಳ ೨೫೦ರಷ್ಟು ಸ್ಪರ್ಧಾರ್ಥಿಗಳು ನಾಲ್ಕು ವಿಭಾಗಗಳಾಗಿ ನಾಲ್ಕು ವೇದಿಕೆಗಳಲ್ಲಿ ೪೦ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಕ್ಕಾಗಿ ಸ್ಪರ್ಧಿಸಿದರು. ೧೫ ಮದ್ರಸಾಗಳ ಪೈಕಿ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾ ಪ್ರಥಮ, ಹುಂಡಿ ಹಿದಾಯತುಲ್ ಇಸ್ಲಾಂ ಮದ್ರಸಾ ದ್ವಿತೀಯ ಹಾಗೂ ನೆಲ್ಲಿಹುದಿಕೇರಿ ದಾರುನ್ನಜಾತ್ ಸುನ್ನಿ ಮದ್ರಸಾ ತೃತೀಯ ಸ್ಥಾನ ಪಡೆಯಿತು. ಸಬ್ ಜೂನಿಯರ್ ವಿಭಾಗದಲ್ಲಿ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾದ ಫರ್ಝಿನ್, ಜೂನಿಯರ್ ವಿಭಾಗದಲ್ಲಿ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾದ ಝಿದಾನ್, ಸೀನಿಯರ್ ವಿಭಾಗದಲ್ಲಿ ಪಾಲಿಬೆಟ್ಟ ಮುಹಿಮ್ಮಾತುದ್ದೀನ್ ಮದ್ರಸಾದ ಆದಿಲ್ ಸ್ಟಾರ್ ಆಫ್ ದ ಫೆಸ್ಟ್ ಗಳಾದರು.

ಸಮಾರೋಪ ಸಮಾರಂಭ ರೇಂಜ್ ಸಮಿತಿ ಅಧ್ಯಕ್ಷ ನೌಷಾದ್ ಝುಹ್‌ರಿ ಅಧ್ಯಕ್ಷತೆಯಲ್ಲಿ ಎಸ್‌ಜೆಎಮ್ ಕೊಡಗು ಜಿಲ್ಲಾಧ್ಯಕ್ಷ ಮುಸ್ತಫ ಸಖಾಫಿ ಉದ್ಘಾಟಿಸಿದರು. ಮಾಲ್ದಾರೆ ಜುಮಾ ಮಸ್ಜಿದ್ ಖತೀಬ್ ರಿಯಾಫ್ ಫಾಳಿಲಿ, ಮಾಲ್ದಾರೆ ಜುಮಾ ಮಸ್ಜಿದ್ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾತನಾಡಿ, ಶುಭಹಾರೈಸಿದರು. ಪಾಲಿಬೆಟ್ಟ ಜುಮಾ ಮಸ್ಜಿದ್ ಆಡಳಿತ ಸಮಿತಿ ಪ್ರ. ಕಾರ್ಯದರ್ಶಿ ಶಮೀರ್ ಮುನ್ನ, ಕಾರ್ಯದರ್ಶಿ ಶಮೀರ್, ದಾರುನ್ನಜಾತ್ ಎಜುಕೇಶನಲ್ ಅಕಾಡಮಿ ಕಾರ್ಯದರ್ಶಿ ರಫೀಖ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ರೇಂಜ್ ಸಮಿತಿ ಪ್ರ ಕಾರ್ಯದರ್ಶಿ ಸಬಾಹ್ ಸಖಾಫಿ ಸ್ವಾಗತಿಸಿ ಮಾಲ್ದಾರೆ ಮದ್ರಸಾ ಸದರ್ ಮುಅಲ್ಲಿಂ ಹಾಶಿರ್ ಸಖಾಫಿ ವಂದಿಸಿದರು.