ಮಡಿಕೇರಿ, ಅ. ೩೧: ಚೆಯ್ಯಂಡಾಣೆ ಬಳಿಯ ಎಡಪಾಲದ ಪೊಯಪಳ್ಳಿ ಮುಸ್ಲಿಂ ಜಮಾಅತ್ ಇದರ ಅಧೀನದಲ್ಲಿ ಕಾರ್ಯಾ ಚರಿಸುತ್ತಿರುವ ತರ್ಬಿಯತು ತುಲಬಾ ದರ್ಸ್ ೨೫ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ಬಗ್ಗೆ ತಿಳಿಸಿದ ಜಮಾಅತ್‌ನ ಅಧ್ಯಕ್ಷ ಕೆ.ಎ. ಬಶೀರ್ ಹಾಜಿ; ೨೦೦೦ ಇಸವಿಯಲ್ಲಿ ಶೈಖುನಾ ಮೂರ್ಯಾಡ್ ಉಸ್ತಾದರ ಆರ್ಶೀವಾ ದದೊಂದಿಗೆ ಉದ್ಘಾಟನೆಗೊಂಡ ತರ್ಬಿಯತು ತುಲಬಾ ದರ್ಸ್ ಅನ್ನು ಶೈಖುನಾ ನಿಝಾರ್ ಉಸ್ತಾದರು ಮುನ್ನಡೆಸುತ್ತಿದ್ದು, ೨೫ ವರ್ಷಗಳನ್ನು ಪೂರೈಸುತ್ತಿದೆ. ಇದರ ಬೆಳ್ಳಿಹಬ್ಬ ಮಹೋತ್ಸವವನ್ನು ನವೆಂಬರ್ ೧ರಿಂದ ೩ರವರೆಗೆ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೆಳ್ಳಿ ಮಹೋತ್ಸವ ಮಹಾ ಸಮ್ಮೇಳನದ ಮೊದಲನೆಯ ನವೆÀಂಬರ್ ೧ರಂದು ಜುಮಾ ನಮಾಝಿನ ಬಳಿಕ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಸಮ್ಮೇಳನ ಆರಂಭಗೊಳ್ಳಲಿದೆ. ಸಂಜೆ ಅಸರ್ ನಮಾಝಿನ ಬಳಿಕ ಶೈಖುನಾ ಮೂರ್ಯಾಡ್ ಉಸ್ತಾದ್ ಅವರಿಂದ ಮೌಲಿದ್ ನಡೆಯಲಿದೆ. ಶೈಖುನಾ ನಾಲಂಗೇರಿ ಮಜೀದ್ ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಸಂಜೆ ೬.೩೦ ಗಂಟೆಗೆ ಉದ್ಘಾಟನಾ ಸಮ್ಮೇಳನ ನಡೆಯಲಿದ್ದು, ರಫೀಶ್ ಸಅದಿ ದೇಲಂಬಾಡಿ ಮುಖ್ಯಭಾಷಣ ನೆರವೇರಿಸಲಿದ್ದಾರೆ. ತಾ. ೨ ರಂದು ಬೆಳಿಗ್ಗೆ ೧೦ ಗಂಟೆಗೆ ಮಹಲ್ ಸಂಗಮ, ಮಧ್ಯಾಹ್ನ ೨ ಗಂಟೆಗೆ ಯುವ ಸಮಾವೇಶ, ಸಂಜೆ ೪ ಗಂಟೆಗೆ ಸಾಂಸ್ಕೃತಿಕ ಸಮಾವೇಶ ನಡೆಯಲಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಹಲವಾರು ರಾಜಕೀಯ ಪ್ರಮುಖರು,

(ಮೊದಲ ಪುಟದಿಂದ) ವಿಧ್ವಾಂಸರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಜೆ ೭ ಗಂಟೆಗೆ ಮತ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಅನ್ವರ್ ಮನ್ನಾನಿ ತೊಡುಪುಝ ಮುಖ್ಯಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ತಾ. ೩ರಂದು ಬೆಳಿಗ್ಗೆ ೫.೩೦ಕ್ಕೆ ಸುಬಹಿ ನಮಾಝಿನ ಬಳಿಕ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ. ೮ ಗಂಟೆಗೆ ಪೂರ್ವ ವಿದ್ಯಾರ್ಥಿ ಸಂಗಮ, ೧೦ ಗಂಟೆಗೆ ಪೋಷಕರ ಸಭೆ, ಮಧ್ಯಾಹ್ನ ೨ ಗಂಟೆಗೆ ಮುತ ಅಲ್ಲಿಂ ವಿದ್ಯಾರ್ಥಿ ಸಂಗಮ ನಡೆಯಲಿದೆ ಎಂದು ಹೆಳೀದರು.

ಸಮಾರೋಪ ಸಮಾರಂಭ

ತಾ. ೩ರಂದು ಸಂಜೆ ೬.೩೦ ಗಂಟೆಗೆ ಸಮಾರೋಪ ಮಹಾ ಸಮ್ಮೇಳನ ನಡೆಯಲಿದ್ದು, ಸಮಸ್ತ ಕೇರಳ ಜಂಇಯತುಲ್ ಉಲಮಾ ಕೋಶಾಧಿಕಾರಿ ಶೈಖುನಾ ಕೊಯ್ಕೋಡ್ ಉಮ್ಮರ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸಲಿದ್ದಾರೆ. ಎಡಪಾಲ ಮುರ‍್ರಿಸ್ ಶೈಖುನಾ ಅಲ್ ಹಾಜ್ ನಿಝಾರ್ ಉಸ್ತಾದ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೂರ್ಯಾಡ್ ಉಸ್ತಾದರ ಪುತ್ರ ಸ್ವಾಲಿಹ್ ಫೈಝಿ ಮುಖ್ಯಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ನೇತಾರರು, ವಿದ್ವಾಂಸರು ಭಾಗವಹಿಸಲಿದ್ದಾರೆ. ನಂತರ ದಿಕ್ರ್ ಹಲ್ಕಾ ಕಾರ್ಯಕ್ರಮ ನಡೆಯಲಿದ್ದು, ಮೂರ್ಯಾಡ್ ಮುರ‍್ರಿಸ್ ಶೈಖುನಾ ಪೊಯನಾಡ್ ಉಸ್ತಾದ್ ಬೋಧನೆ ಮಾಡಲಿದ್ದಾರೆ. ಶೈಖುನಾ ಉಮ್ಮರ್ ಮುಸ್ಲಿಯಾರ್ ಕಿಶೇರಿ ನೇತೃತ್ವ ನೀಡಲಿದ್ದಾರೆ ಎಂದು ಬಶೀರ್ ಹಾಜಿ ತಿಳಿಸಿದರು. ಸಮ್ಮೇಳನದ ಎಲ್ಲಾ ದಿನ ರಾತ್ರಿ ಅನ್ನದಾನ ನಡೆಯಲಿದ್ದು, ಮಹಿಳೆಯರಿಗೆ ಪ್ರತ್ಯೇಕ ಸೌಕರ್ಯ ಮಾಡಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಮಾಅತ್ ಉಪಾಧ್ಯಕ್ಷ ಉಮ್ಮರ್ ಎ.ಎಂ., ಕಾರ್ಯದರ್ಶಿ ಶರೀಫ್ ಝೈನಿ, ಖಜಾಂಚಿ ಕೆ.ಇ.ಮಹಮ್ಮದ್, ರಾಷ್ಟçಪ್ರಶಸ್ತಿ ಪುರಸ್ಕೃತ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಎಂ. ಹಂಸ ಇದ್ದರು.