ಮಡಿಕೇರಿ, ಅ. ೩೧: ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದಿಂದ ಪ್ರಸಕ್ತ ವರ್ಷದ ಕೊಡವ ನಮ್ಮೆ ಕಾರ್ಯಕ್ರಮವನ್ನು ಈ ಬಾರಿ ನವೆಂಬರ್ ೨೮ರಿಂದ ಡಿಸೆಂಬರ್ ೧ರ ತನಕ ನಡೆಸಲು ತೀರ್ಮಾನಿಸಲಾಗಿದೆ. ಬಾಳುಗೋಡುವಿನಲ್ಲಿರುವ ಒಕ್ಕೂಟದ ಕೇಂದ್ರವಾದ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮುಚ್ಛಯ ಸಭಾಂಗಣದಲ್ಲಿ ನಿನ್ನೆ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಈ ದಿನಾಂಕವನ್ನು ಅಂತಿಮಗೊಳಿಸಲಾಯಿತು. ನಾಲ್ಕು ದಿನಗಳ ಕಾಲದ ಕಾರ್ಯಕ್ರಮದಲ್ಲಿ ಅಂತರ ಕೊಡವ ಸಮಾಜಗಳ ನಡುವೆ ಸಾಂಸ್ಕೃತಿಕ ಸ್ಪರ್ಧೆ, ಹಾಕಿ ಪಂದ್ಯಾವಳಿ, ಹಗ್ಗಜಗ್ಗಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಹಿಂದಿನ ವರ್ಷಗಳಂತೆ ನಡೆಯಲಿದೆ. ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರುಗಿದ್ದು, ಕೇಂದ್ರದ ಬೆಳವಣಿಗೆ, ಮತ್ತಿತರ ವಿಚಾರಗಳ ಕುರಿತಾಗಿ ಚರ್ಚೆ ನಡೆಯಿತು. ಪ್ರಸ್ತುತ ರೂ. ಕೋಟಿ ವೆಚ್ಚದಲ್ಲಿ ಆರಂಭಗೊAಡಿರುವ ಅಭಿವೃದ್ಧಿ ಕೆಲಸಗಳನ್ನು ಸಮರ್ಪಕ ರೀತಿಯಲ್ಲಿ ನಡೆಸಲು ಚರ್ಚೆ ನಡೆಯಿತು. ಕೇಂದ್ರಕ್ಕೆ ದೊರೆತಿರುವ ಅನುದಾನದ ಬಗ್ಗೆ ಕೆಲವರ ನಡುವೆ ಬಿಸಿಬಿಸಿ ಚರ್ಚೆ ನಡೆಯಿತು. ಯಾವುದೇ ಪಕ್ಷದ ಅಥವಾ ಜನಪ್ರತಿನಿಧಿಗಳ ಮೂಲಕ ಅನುದಾನ ಬಂದರೂ ಅದು ಜನಾಂಗದ ಹಿತದೃಷ್ಟಿಯಿಂದ ಕೂಡಿರಬೇಕಲ್ಲದೆ, ರಾಜಕೀಯ ವಿಚಾರಗಳು ಬರಬಾರದು ಎಂಬ ಸಲಹೆ - ಮಾತುಗಳು ಕೇಳಿಬಂದವು.
ಕೊಡವ ಸಂಸ್ಕೃತಿಯನ್ನು ಸರಿಯಾಗಿ ಪಾಲಿಸುವುದು ಸೇರಿದಂತೆ ಸಂಸ್ಕೃತಿ- ಸಾಂಪ್ರದಾಯಿಕ ಧಿರಿಸಿನ ದುರ್ಬಳಕೆ ನಡೆಯದಂತೆ ಎಚ್ಚರ ವಹಿಸುವ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಹಲವು ಸಲಹೆಗಳನ್ನು ನೀಡಿ, ಜನಾಂಗದ ಅಗತ್ಯತೆಗೆ ರಾಜಕೀಯ ರಹಿತವಾಗಿ ಸ್ಪಂದಿಸುವುದಾಗಿ ಭರವಸೆಯಿತ್ತರು. ಸಂಸ್ಥೆಯ ಮಹಾಪೋಷಕರಾದ ಮಾಜಿ ಸಚಿವ ಯಂ.ಸಿ. ನಾಣಯ್ಯ, ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರುಗಳು ಚರ್ಚೆಯಲ್ಲಿ ಭಾಗಿಗಳಾಗಿದ್ದರು.
ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಹೆಸರಿನಲ್ಲಿರುವ ಸಮುಚ್ಛಯವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವ ಬಗ್ಗೆ ಸಲಹೆಗಳು ಕೇಳಿಬಂದವು.
ಸಭೆಯಲ್ಲಿ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೆರ ಮನುಕುಮಾರ್, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಬಾಳೆಲೆಯ ಮಲಚೀರ ಬೋಸ್, ಮಕ್ಕಂದೂರಿನ ತಂಬುಕುತ್ತಿರ ಮಧು, ನಾಪಂಡ ರವಿ ಕಾಳಪ್ಪ, ಸೋಮವಾರಪೇಟೆಯ ಮಾಳೇಟಿರ ಅಭಿಮನ್ಯುಕುಮಾರ್, ನಾಪೋಕ್ಲುವಿನ ಮುಂಡAಡ ಸಿ. ನಾಣಯ್ಯ, ಗೋಣಿಕೊಪ್ಪಲುವಿನ ಅಜ್ಜಿಕುಟ್ಟಿರ ಶಾಂತು, ಹುದಿಕೇರಿಯ ಮೀದೇರಿರ ನವೀನ್, ಬೆಂಗಳೂರು ಕೊಡವ ಸಮಾಜ, ಗರ್ವಾಲೆ ಸಮಾಜ ಸೇರಿದಂತೆ ಇತರ ಸಮಾಜದ ಪ್ರತಿನಿಧಿಗಳು, ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.