ಸುಂಟಿಕೊಪ್ಪ, ಅ. ೩೧: ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಕಗ್ಗಂಟಾದ ಅಪರಾಧ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸರನ್ನು ಸನ್ಮಾನಿಸಿ, ೧೦ ಕುರ್ಚಿಗಳನ್ನು ಠಾಣೆಗೆ ಕೊಡುಗೆಯಾಗಿ ನೀಡಲಾಯಿತು.
ಕೊಲೆಗೈದು ದೇಹವನ್ನು ಸುಂಟಿಕೊಪ್ಪ ಪನ್ಯ ಕಾಫಿ ತೋಟದಲ್ಲಿ ಸುಟ್ಟುಹಾಕಿದ್ದ ಪ್ರಕರಣ ಜಾಡು ಹಿಡಿದ ಸುಂಟಿಕೊಪ್ಪ ಪೊಲೀಸರು ತನಿಖಾ ತಂಡಗಳ ಮೂಲಕ ರಾಜ್ಯ ಹಾಗೂ ಅಂತರಾಜ್ಯದಲ್ಲಿ ಕೊಲೆ ಆರೋಪಿಗಳನ್ನು ಬಂಧಿಸಿದ ಹಿನ್ನೆಲೆ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭ ವಾಹನ ಚಾಲಕರ ಸಂಘದ ವತಿಯಿಂದ ಪೊಲೀಸ್ ಠಾಣೆಗೆ ೧೦ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಮುನೀರ್, ಅಬ್ದುಲ್ ಅಜೀಜ್, ಅವಲಕುಟ್ಟಿ, ಸುರೇಶ್, ಇನಾಸ್ ಡಿಸೋಜ, ಸಂದೀಪ್, ಅಸ್ಗರ್, ಕೃಷ್ಣಪ್ಪ, ರಿಜ್ವಾನ್, ರಕ್ಷಿತ್, ಪವನ್, ಲೋಕೇಶ್ (ಲೀಕಿ) ಜೈನುದ್ದೀನ್ ಗೀತಾ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತಿತರರು ಇದ್ದರು.