ಪೊನ್ನಂಪೇಟೆ, ಅ. ೩೦: ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮದ ರೈತರೊಬ್ಬರಿಗೆ ಸೇರಿದ ಜಮೀನುಗಳನ್ನು ಬಾಳೆಲೆ ಕೆನರಾ ಬ್ಯಾಂಕ್ ಶಾಖೆ ಹರಾಜು ಹಾಕುವ ಬೆದರಿಕೆ ಹಾಕಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಬಾಳೆಲೆ ಕೆನರಾ ಶಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಬ್ಯಾಂಕ್‌ಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಬ್ಯಾಂಕ್ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಕಾಡ್ಯಮಾಡ ಮನು ಸೋಮಯ್ಯ ಅವರು ಮಾತನಾಡಿ, ರೈತರನ್ನು ಬ್ಯಾಂಕುಗಳು ಶೋಷಣೆ ಮಾಡುತ್ತಿವೆ. ಬ್ಯಾಂಕ್‌ನಿAದ ಸಾಲ ಪಡೆದ ರೈತರ ಸಾಲ ವಸೂಲಾತಿ ನೆಪದಲ್ಲಿ ಜಮೀನುಗಳನ್ನು ಹರಾಜು ಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಬ್ಯಾಂಕ್‌ನ ಮೇಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಈ ಸಂದರ್ಭ ಮಡಿಕೇರಿಯಿಂದ ಆಗಮಿಸಿದ ಬ್ಯಾಂಕ್‌ನ ಮೇಲಧಿಕಾರಿಗಳು ಪ್ರತಿಭಟನಾ ನಿರತ ರೈತರ ಸಮಸ್ಯೆ ಆಲಿಸಿದರು. ಈ ಸಂದರ್ಭ ಸಾಲ ವಸೂಲಾತಿ ನೆಪದಲ್ಲಿ ಬಾಳೆಲೆ ರೈತರೋರ್ವರ ಜಮೀನುಗಳನ್ನು ಹರಾಜು ಹಾಕದಂತೆ ಮತ್ತು ಸಾಲ ಮರುಪಾವತಿಗೆ ಅವರಿಗೆ ಕಾಲಾವಕಾಶ ನೀಡುವಂತೆ
(ಮೊದಲ ಪುಟದಿಂದ) ಪ್ರತಿಭಟನಾಕಾರರು ಒತ್ತಾಯಿಸಿದರು. ಬಾಳೆಲೆ ವ್ಯಾಪ್ತಿಯಲ್ಲಿ ಸಾಲ ಮರುಪಾವತಿಗೆ ಬಾಕಿ ಇರುವ ರೈತರೊಂದಿಗೆ ಬ್ಯಾಂಕ್ ಅಧಿಕಾರಿಗಳು ಸಭೆಯೊಂದನ್ನು ಆಯೋಜಿಸಿ ರೈತರ ಸಮಸ್ಯೆ ಆಲಿಸುವಂತೆ ಮತ್ತು ಸಾಲಮರುಪಾವತಿಗೆ ಕಾಲಾವಕಾಶ ನೀಡುವಂತೆ ಆಗ್ರಹಿಸಿದರು. ಸಾಲ ಮರುಪಾವತಿಗೆ ಬಾಕಿ ಇರುವ ಬಾಳೆಲೆಯ ರೈತರೋರ್ವರಿಗೆ ಒಂದು ತಿಂಗಳು ಕಾಲಾವಕಾಶ ನೀಡುವುದು ಹಾಗೂ ನ.೧೫ ರೊಳಗೆ ಬ್ಯಾಂಕ್ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸುವುದಾಗಿ ಬ್ಯಾಂಕ್ ಅಧಿಕಾರಿಗಳು ದಾಖಲೆ ಬರೆದುಕೊಟ್ಟು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜಯ್ ಬೋಪಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಚೆಪ್ಪುಡಿರ ಕಾರ್ಯಪ್ಪ, ಅಳಮೇಂಗಡ ಬೋಸ್ ಮಂದಣ್ಣ, ಬಾಳಲೆ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೋಡಮಾಡ ಸುಖೇಶ್, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಕ್ಕೇರ ಸೂರ್ಯ ಅಯ್ಯಪ್ಪ, ಕಾಟಿಮಾಡ ಶರೀನ್, ಮಲಚೀರ ನಾಣಯ್ಯ, ಬಾಳೆಲೆ ಹೋಬಳಿ ಅಧ್ಯಕ್ಷ ಕಿಸಾ ಮಾಚಯ್ಯ ಹಾಗೂ ಪೊನ್ನಂಪೇಟೆ ತಾಲೂಕಿನ ಎಲ್ಲಾ ಹೋಬಳಿ ಅಧ್ಯಕ್ಷರು, ರೈತ ಬಾಂಧವರು ಪಾಲ್ಗೊಂಡಿದ್ದರು.