ಕೂಡಿಗೆ, ಅ. ೩೦: ಕೂಡಿಗೆ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯ ತುರ್ತುಸಭೆಯು ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ತುರ್ತುಸಭೆಯಲ್ಲಿ ನೂತನ ಮದ್ಯದ ಅಂಗಡಿಯನ್ನು ತೆರೆಯಲು ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಜಾಗದ ನಿರಾಪೇಕ್ಷÀಣಾ ಪತ್ರವನ್ನು (ಎನ್.ಓ.ಸಿ) ಅಭಿವೃದ್ಧಿ ಅಧಿಕಾರಿ ನೀಡಿರುವ ಬಗ್ಗೆ ಸಭೆಯಲ್ಲಿ ಆರೋಪ ವ್ಯಕ್ತವಾಯಿತು. ಕಳೆದ ತಿಂಗಳ ಮಾಸಿಕಸಭೆಗೆ ಮದ್ಯದ ಅಂಗಡಿ ತೆರೆಯಲು ಎನ್.ಓ.ಸಿ.ಗೆ ಅರ್ಜಿ ಯನ್ನು ಅರ್ಜಿದಾರ ಸಲ್ಲಿಸಿದರು. ಆದರೆ ಕಳೆದ ಮಾಸಿಕ ಸಭೆಯಲ್ಲಿ ಹಾಜರಿದ್ದ ಸದಸ್ಯರು ಸಭೆಯಲ್ಲಿ ಸ್ಧಳ ಪರಿಶೀಲನೆ ನಡೆಸಿ ಸಮರ್ಪಕವಾದ ವರದಿಯ ಆಧಾರದ ಮೇಲೆ ಮುಂದಿನ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳವ ಬಗ್ಗೆ ತೀರ್ಮಾನ ಮಾಡಲಾಗಿತ್ತು.

ಆದರೂ ಆಡಳಿತ ಮಂಡಳಿಯ ಗಮನಕ್ಕೆ ಬಾರದೆ ಅಭಿವೃದ್ಧಿ ಅಧಿಕಾರಿ ಜಾಗದ ಎನ್.ಓ.ಸಿ. ನೀಡಿರುವ ಬಗ್ಗೆ ಹೆಚ್.ಎಸ್. ರವಿ, ಅರುಣ್‌ರಾವ್, ಅನಂತ, ಟಿ.ಪಿ. ಹಮೀದ್, ಮೋಹಿನಿ, ಮಂಗಳ, ವಾಣಿ, ಜಯಶೀಲಾ, ವಿರೋಧ ವ್ಯಕ್ತಪಡಿಸಿ ಅನುಮತಿ ರದ್ದುಗೊಳಿಸುವಂತೆ ಒತ್ತಾಯ ಮಾಡಿದರು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಮಂಜುಳಾ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.