ಚೆಟ್ಟಳ್ಳಿ, ಅ. ೩೦: ೨೦೨೫ರಲ್ಲಿ ಮಲೇಶಿಯಾದಲ್ಲಿ ನಡೆಯಲಿರುವ ಮಿಸಸ್ ಏಷ್ಯಾ ಸ್ಪರ್ಧೆಗೆ ಕಳತ್ಮಾಡುವಿನ ಮೇಕೇರಿರ ಅರ್ಪಿತಾ ಕಾರ್ಯಪ್ಪ ಆಯ್ಕೆಯಾಗಿದ್ದಾರೆ.
೨೦೨೨ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಮಿಸಸ್ ಕರ್ನಾಟಕ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್, ೨೦೨೩ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಮಿಸಸ್ ಸೌತ್ ಇಂಡಿಯಾದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಫೆಬ್ರವರಿಯಲ್ಲಿ ಪೂಣೆಯಲ್ಲಿ ನಡೆದ ಮಿಸೆಸ್ ಸೂಪರ್ ಮಾಡೆಲ್ ಫೇಸ್ ಆಫ್ ಭಾರತ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.
೨೦೨೩ರಲ್ಲಿ ವಾಹನ ಅಪಘಾತ ಕಾರಣ ೨೦೨೩ರ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆಲುವು ಕೈತಪ್ಪಿತು. ನಂತರ ಛಲಬಿಡದ ಅರ್ಪಿತಾ ೨೦೨೩ರ ಸೆಪ್ಟಂಬರ್‌ನಲ್ಲಿ ವೀರಾಜಪೇಟೆಯಲ್ಲಿ ನಡೆದ ಮಿಸಸ್ ಕೂರ್ಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಜಯಿಸಿದರು.
ಡಿಕೆ ಪೇಜೆಂಟ್ ಪ್ರೆöÊಡ್ ಆಫ್ ಇಂಡಿಯಾ ಏಪ್ರಿಲ್ ೨೦೨೪ರಲ್ಲಿ ಆಯೋಜಿಸಿದ್ದ ಮಿಸಸ್ ಸೌತ್ ಇಂಡಿಯಾ ಹಾಗೂ ಸೆಪ್ಟಂಬರ್‌ನಲ್ಲಿ ನಡೆದ ಪ್ರೆöÊಡ್ ಆಫ್ ಇಂಡಿಯಾ - ಮಿಸಸ್ ಇಂಡಿಯಾ ೨೦೨೪ ರ ಕಿರೀಟವನ್ನು ಅರ್ಪಿತಾ ಕಾರ್ಯಪ್ಪ ತಮ್ಮದಾಗಿಸಿಕೊಂಡರು.
ಮುAದಿನ ೨೦೨೫ ಜನವರಿಯಲ್ಲಿ ಮಲೇಶಿಯಾದಲ್ಲಿ ನಡೆಯಲಿರುವ ಮಿಸಸ್ ಏಷ್ಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಪಿತಾ ಕಾರ್ಯಪ್ಪ ಸಜ್ಜಾಗುತ್ತಿದ್ದಾರೆ. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಪದವೀಧರರಾಗಿರುವ ಅರ್ಪಿತಾ ಕಾರ್ಯಪ್ಪ ಮಾದಾಪುರ ಮೇದುರ ಚರ್ಮಣ ಹಾಗೂ ವಾಣಿ ದಂಪತಿಗಳ ಪುತ್ರಿ ಹಾಗೂ ರ‍್ಯಾಲಿಪಟು ಗೋಣಿಕೊಪ್ಪಲು ಕಳತ್ಮಾಡುವಿನ ಮೇಕೇರಿರ ಕಾರ್ಯಪ್ಪ ಅವರ ಪತ್ನಿ.
- ಪುತ್ತರಿರ ಕರುಣ್ ಕಾಳಯ್ಯ