ನಾಪೋಕ್ಲು, ಅ. ೩೦ : ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ನಡೆಯುತ್ತಿರುವ ಅಂತರ ಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ಬೇತು, ಯವಕಪಾಡಿ, ಪುಲಿಕೋಟು (ಗ್ರೀನ್ಸ್) ಮತ್ತು ಮರಂದೋಡ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದವು.
ಬೇತು ತಂಡ ನೆಲಜಿ ವಿರುದ್ಧ ೨-೧ ಗೋಲುಗಳ ಅಂತರದಲ್ಲ್ಲಿ ಜಯಗಳಿಸಿತು. ಪುಲಿಕೋಟು (ಗ್ರೀನ್ಸ್) ತಂಡವು ಕೊಳಕೇರಿ ವಿರುದ್ಧ ೨-೧ ಅಂತರದ ಜಯಗಳಿಸಿತು. ಯವಕಪಾಡಿ ತಂಡ ನಾಪೋಕ್ಲು ತಂಡವನ್ನು ೨-೧ ಗೋಲುಗಳ ಅಂತರದಿAದ ಪರಾಭಾವಗೊಳಿಸಿ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿಕೊಂಡರು.
ಮರಂದೋಡ ತಂಡಕ್ಕೆ ೧೧ ಪೆನಾಲ್ಟಿ ಕಾರ್ನರ್ ಅವಕಾಶ ದೊರೆತು ೬-೦ ಅಂತರದ ಪೇರೂರು ವಿರುದ್ಧ ಭರ್ಜರಿ ಜಯ ಸಾಧಿಸಿತು.