ವೀರಾಜಪೇಟೆ, ಅ. ೩೦: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೆಟಿವ್ ಸೊಸೈಟಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನೆಲ್ಲಮಕ್ಕಡ ಪಿ. ಉಮೇಶ್ ಮುತ್ತಣ್ಣ, ಉಪಾಧ್ಯಕ್ಷರಾಗಿ ಚೇಂದAಡ ವಸಂತ್ ಕುಮಾರ್ ಅವರು ಮುಂದಿನ ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಂಜಯ್ ಕುರುಳುಪ್ಪೆ ತಿಳಿಸಿದ್ದಾರೆ.

ಸಂಸ್ಥೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನಿರ್ದೇಶಕರುಗಳಾದ ನೆಲ್ಲಮಕ್ಕಡ ಸಿ. ಬೆಳ್ಯಪ್ಪ, ನೆಲ್ಲಚಂಡ ಭೀಮಯ್ಯ, ಕಾಂಡAಡ ಎಂ. ಚರ್ಮಣ, ಐನಂಡ ಪಿ. ಗಣಪತಿ, ಕೊಂಗAಡ ಎ. ನಾಣಯ್ಯ, ವಾಂಚಿರ ಟಿ. ನಾಣಯ್ಯ, ಚೇಂದ್ರಿಮಾಡ ಕೆ. ನಂಜಪ್ಪ, ಬೊಳ್ಳೆಪಂಡ ಎಂ. ಸುರೇಶ್, ವಾಟೇರಿರ ಎಸ್. ಪೂವಯ್ಯ, ಕೇಳಪಂಡ ವಿಶ್ವನಾಥ್, ಪಟ್ಟಡ ದಿವ್ಯಾ, ಮೇಕೇರಿರ ಪಾಲಿ ಸುಬ್ರಮಣಿ, ಕಾಳೇಂಗಡ ಪಿ. ತಿಮ್ಮಯ್ಯ ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಪಟ್ಟಡ ಟೀನಾ ಉಪಸ್ಥಿತರಿದ್ದರು. ಕಳೆದ ಐದು ವರ್ಷಗಳಿಂದ ಸಂಘವು ಆಡಳಿತ ಮಂಡಳಿ, ಸದಸ್ಯ ರುಗಳು, ಸಿಬ್ಬಂದಿಗಳ ಸಹಕಾರದಿಂದ ಉತ್ತಮವಾಗಿ ಮುನ್ನಡೆ ಯುತ್ತಿದೆ. ಬ್ಯಾಂಕಿAಗ್ ಸೇವೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಸಂಸ್ಥೆಗೆ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ನೂತನ ಅಧ್ಯಕ್ಷ ಉಮೇಶ್ ಹೇಳಿದರು.