ಪೊನ್ನAಪೇಟೆ, ಅ. ೩೦: ಕಾನೂರು ಗ್ರಾಮದ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕಾನೂರು ಗ್ರಾಮ ಪಂಚಾಯಿತಿ ಮಟ್ಟದ ಕಾನೂರು ಚಾಂಪಿಯನ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಪಂದ್ಯಾವಳಿಯು ನಾಳೆಯಿಂದ ನವೆಂಬರ್ ೩ ರವರೆಗೆ ಕಾನೂರು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ ರೂ. ೩೦ ಸಾವಿರ, ದ್ವಿತೀಯ ಬಹುಮಾನ ರೂ. ೨೦ ಸಾವಿರ ಮತ್ತು ತೃತೀಯ ಬಹುಮಾನ ರೂ. ೫ ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೯೮೦೯೮೯೬೯೫ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.