ಶ್ರೀಮAಗಲ, ಅ. ೨೨: ನಾಲ್ಕು ವರ್ಷದ ಪುಟಾಣಿಯೂ ಸೇರಿದಂತೆ ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟದ ಯುವಕ ಯುವತಿಯರ ತಂಡದ ಕಲಾವಿದರು ಪ್ರದರ್ಶಿಸಿದ ಕೊಡವ ಸಂಸ್ಕೃತಿಯ ವಿವಿಧ ವಿಶೇಷ ನೃತ್ಯ ಹಾಗೂ ಸಂಗೀತ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರ ಗಮನ ಸೆಳೆಯಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾದುಮಂಡ ಚಿಮ್ಮ ಉತ್ತಯ್ಯ ಮಾತನಾಡಿ ಕೊಡವ ಜನಾಂಗವು ಪ್ರಪಂಚದಲ್ಲಿಯೇ ವಿಭಿನ್ನ ಸಂಸ್ಕೃತಿ ಹಾಗೂ ಆಚರಣೆಯಿರುವ ಜನಾಂಗವಾಗಿದ್ದು ವಿಶ್ವದಲ್ಲಿಯೇ ಗೌರವಯುತವಾದ ಸ್ಥಾನ ಪಡೆದಿದೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಈ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮವು ಇದಕ್ಕೆ ಪೂರಕವಾಗಿದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ತಿಂಗಕೋರ್ ಮೊಟ್ಟ್ ತಲಕಾವೇರಿಕ್ ತಂಡದ ನಾಯಕ ಮಲ್ಲಪನ್ನೆರ ವಿನು ಚಿಣ್ಣಪ್ಪ ಮಾತನಾಡಿ ಹಿಂದಿನ ಕಾಲದಲ್ಲಿ ಇಡೀ ಕೊಡಗು ದೇಶಕ್ಕೆ ಪುತ್ತರಿ ಹಬ್ಬದ ದಿನವನ್ನು ತಾವಳಗೇರಿ ಮೂಂದ್ ನಾಡ್'ನ ತಕ್ಕ ಮುಖ್ಯಸ್ಥರು ನಿಗದಿಪಡಿಸುತ್ತಿದ್ದರು ಎಂದು ಇತಿಹಾಸದಲ್ಲಿ ದಾಖಲಿಸಲಾಗಿದೆ. ಅಂತಹ ಐತಿಹಾಸಿಕ ಹಿನ್ನೆಲೆ ಇರುವ ಈ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಹಿರಿಯರಾದ ಕೋಟ್ರಮಾಡ ಮುತ್ತಮ್ಮ ಗಣಪತಿ, ಪಂಚಭಾಷಾ ಲೇಖಕಿ ಉಳುವಂಗಡ ಕಾವೇರಿ ಉದಯ ಹಾಗೂ ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಚೆಟ್ಟಂಗಡ ಭೂಮಿಕ ಸೋಮಣ್ಣ ಮಾತನಾಡಿ ಕೊಡವ ಸಮಾಜ ನಡೆಸುತ್ತಿರುವ ಎಲ್ಲಾ ಕಾರ್ಯಕ್ರಮಗಳಿಗೂ ಎಲ್ಲರಿಂದ ಉತ್ತಮ ಸಹಕಾರ ಸಿಗುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಮಾತನಾಡಿ , ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಆಚಾರ ವಿಚಾರದ ಬೆಳವಣಿಗೆಗೆ ಅಗತ್ಯ ಯೋಜನೆ ರೂಪಿಸುವ ನಿಟ್ಟಿನಲ್ಲಿ ನಮ್ಮ ಕೊಡವ ಸಮಾಜವು ಪ್ರಯತ್ನಿಸಲಿದೆ ಎಂದರು.

ಕೊಡವ ಸಮಾಜದ ಸದಸ್ಯೆ ಅಜ್ಜಮಡ ಸಾವಿತ್ರಿ ಪ್ರಾರ್ಥಿಸಿ, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಸ್ವಾಗತಿಸಿ, ನಿರ್ದೇಶಕಿ ಚಂಗುಲAಡ ಅಶ್ವಿನಿ ನಿರೂಪಿಸಿ, ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು. ಖಜಾಂಚಿ ಚಂಗುಲAಡ ಸತೀಶ್, ನಿರ್ದೇಶಕರಾದ ಆಂಡಮಾಡ ಸತೀಶ್ ವಿಶ್ವನಾಥ್, ತಡಿಯಂಗಡ ಶಮ್ಮಿ ಸುಬ್ಬಯ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.

ತಾ. ೨೩ರಂದು (ಇಂದು) ಸಂಜೆ ೬.೩೦ ಗಂಟೆಯಿAದ ಬೇಗೂರ್ ಕೊಡವ ಸಾಂಸ್ಕೃತಿಕ ಕೂಟದ ಸದಸ್ಯರಿಂದ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.