ನಾಪೋಕ್ಲು, ಅ. ೧೮: ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಹೇಳಿದರು.
ನಾಪೋಕ್ಲು ಲಯನ್ಸ್ ಕ್ಲಬ್, ನಾಪೋಕ್ಲು ಮಹಿಳಾ ಸಮಾಜ ಮತ್ತು ಗಾಯತ್ರಿ ಮಹಿಳಾ ಸಂಘದ ಸಹಯೋಗದೊಂದಿಗೆ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸೇವಾ ದಿನಾಚರಣೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಆವರಣದಲ್ಲಿದ್ದ ಕಾಡು ಕಡಿದು ಪ್ಲಾಸ್ಟಿಕ್, ಕಸ, ಕಡ್ಡಿಗಳನ್ನು ಸಂಗ್ರಹಿಸುವುದರ ಮೂಲಕ ಸ್ವಚ್ಛಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ, ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಕುಂಡ್ಯೋಳAಡ ಗಣೇಶ್ ಮುತ್ತಪ್ಪ, ಅಪ್ಪಾರಂಡ ಶುಭಾಷ್ ತಿಮ್ಮಯ್ಯ ಮಾದೆಯಂಡ ಡಿ. ಕುಟ್ಟಪ್ಪ, ಗಾಯತ್ರಿ ಮಹಿಳಾ ಸಂಘದ ಅಧ್ಯಕ್ಷೆ ಮೂವೆರ ಧರಣಿ ಗಣಪತಿ, ಕಾರ್ಯದರ್ಶಿ ಕೇಲೆಟಿರ ಮಾಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಬೊಪಂಡ ಬೊಳ್ಳಮ್ಮ ಸೇರಿದಂತೆ ಮಹಿಳಾ ಸಮಾಜ, ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.