ಸುಂಟಿಕೊಪ್ಪ, ಅ. ೧೮: ಸುಂಟಿಕೊಪ್ಪದಿAದ ಚೆಟ್ಟಳ್ಳಿಗೆ ತೆರಳುವ ರಾಜ್ಯ ಹೆದ್ದಾರಿಯ ಶ್ರೀ ದೇವಿ ಬಳಿ ರಸ್ತೆ ಅಪಾಯದ ಸ್ಥಿತಿಯಲ್ಲಿದ್ದು, ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ಶ್ರೀ ದೇವಿ ಗ್ರಾಮದ ಬಳಿ ರಸ್ತೆಗೆ ಹೊಂದಿಕೊAಡಿರುವ ಕೆರೆಯೊಂದಿದ್ದು ಈ ಕೆರೆಯ ಒಂದು ಭಾಗ ಬಿರುಕುಬಿಟ್ಟಿದ್ದು, ಈ ರಸ್ತೆಯಲ್ಲಿ ತೆರಳುವ ವಾಹನಗಳಿಗೆ ಅಪಾಯದ ಮುನ್ಸೂಚನೆಯಿರುವುದರಿಂದ ಸುಂಟಿಕೊಪ್ಪ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ತೆರಳಿ ಅಪಾಯದ ಫಲಕ ಅಳವಡಿಸಿ ವಾಹನ ಸವಾರರಿಗೆ ಎಚ್ಚರಿಕೆಯ ಸೂಚನೆ ನೀಡಿರುತ್ತಾರೆ.
ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಈ ರಸ್ತೆ ತೀರಾ ಹದಗೆಟ್ಟಿದ್ದು, ಈ ರೀತಿಯಾಗಲು ಕಾರಣವಾಗಿದೆ. ಠಾಣಾಧಿಕಾರಿಯ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.