ಕಣಿವೆ, ಅ. ೧೮: ಕಾವೇರಿ ತುಲಾಸಂಕ್ರಮಣದ ಅಂಗವಾಗಿ ತಲಕಾವೇರಿಯ ಕುಂಡಿಕೆಯಿAದ ತಂದ ಗಂಗಾಜಲದಿAದ ಹಾರಂಗಿ ಜಲಾಶಯದ ಮುಂಬದಿಯಲ್ಲಿರುವ ಕಾವೇರಿ ಪ್ರತಿಮೆಗೆ ಕ್ಷೇತ್ರದ ಶಾಸಕ ಡಾ. ಮಂತರ ಗೌಡ ಹಾಗೂ ಅರಕಲಗೂಡು ಶಾಸಕ ಎ. ಮಂಜು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ಹಾರಂಗಿ ಅಚ್ಚುಕಟ್ಟು ಪ್ರದೇಶದ ಅಪಾರ ಸಂಖ್ಯೆಯ ರೈತರು ಹಾಗೂ ಬೆಂಬಲಿಗರೊAದಿಗೆ ಧಾವಿಸಿದ ಶಾಸಕದ್ವಯರು ನಾಡಿನಾದ್ಯಂತ ಈ ಬಾರಿ ಅತ್ಯುತ್ತಮ ಮಳೆಯಾಗಿರುವು ದರಿಂದ ರೈತಾಪಿಗಳು ಬೆಳೆದಿರುವ ಬೆಳೆಯ ಉತ್ತಮ ಫಸಲು ಬಂದು ನಾಡು ಸಮೃದ್ಧವಾಗಲೆಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿದರು. ನಂತರ ಜಲಾಶಯಕ್ಕೆ ತೆರಳಿ ಬಾಗಿನ ಸಮರ್ಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ
(ಮೊದಲ ಪುಟದಿಂದ) ಶಾಸಕ ಡಾ. ಮಂತರ ಗೌಡ, ಈ ಬಾರಿ ಕಾವೇರಿ ತಾಯಿಗೆ ತಲಕಾವೇರಿಯ ಪವಿತ್ರ ತೀರ್ಥವನ್ನು ತಂದು ಅಭಿಷೇಕ ಮಾಡಿ ಪೂಜಿಸಿ ಪ್ರಾರ್ಥಿಸಲಾಗಿದೆ.
ರೈತಾಪಿ ಸಂಕುಲಕ್ಕೆ ಕೃಷಿಗೆ ನೀರು ಹರಿಸುವ ಜಲಾಶಯಕ್ಕೆ ರೈತರನ್ನೆಲ್ಲಾ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಅವರೊಟ್ಟಿಗೆ ಊಟ ಮಾಡುವ ಉದ್ದೇಶದಿಂದ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ಹೇಳಿದರು.
ಈ ಸಂದರ್ಭ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ, ಕುಶಾಲನಗರ ತಾಲೂಕಿನ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಕಾಂಗ್ರೆಸ್ ಪ್ರಮುಖರಾದ ಮಂಜುನಾಥ ಗುಂಡೂರಾವ್, ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರನಾಯಕ್, ಟಿ.ಪಿ. ಹಮೀದ್ ಮೊದಲಾದವರಿದ್ದರು.
ಇದೇ ಸಂದರ್ಭ ನೀರು ಬಳಕೆದಾರರ ಸಂಘಗಳ ಪದಾಧಿಕಾರಿಗಳಾದ ಕಾವೇರಿ ನೀರು ಬಳಕೆದಾರರ ಮಹಾ ಮಂಡಳದ ಅಧ್ಯಕ್ಷ ಎಸ್.ಸಿ. ಚೌಡೇಗೌಡ, ಜಿಟ್ಡೇನಹಳ್ಳಿ ಅಶೋಕ್, ರಮೇಶ್ ಹುಣಸೂರು, ಲೋಕೇಶ್ ಬಸವಾಪಟ್ಟಣ, ಯತೀಶ್ ಮಾಯಗೌಡನಹಳ್ಖಿ, ಕಿರಣಕುಮಾರ್ ಹುಣಸೂರು, ಸುಬ್ಬಯ್ಯ ಐಗೂರು, ತಿಮ್ಮೇಗೌಡ ಕೆ.ಆರ್. ನಗರ, ಬಿಎಸ್ಮಹರೀಶ್ ದಿಂಡಗಾಡು, ಗುರುಲಿಂಗಪ್ಪ, ಉಮಾ ಪ್ರಭಾಕರ್ ಮೊದಲಾದವರಿಗೆ ಕಾವೇರಿ ತಾಯಿಯ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು. ವರದಿ : ಕೆ.ಎಸ್.ಮೂರ್ತಿ