ನಾಪೋಕ್ಲು, ಅ. ೧೮ : ಸಮೀಪದ ಇತಿಹಾಸ ಪ್ರಸಿದ್ಧ ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದ ಕಾವೇರಿ ಜಾತ್ರೆಗೆ ತೆರಳಿದ್ದ ವ್ಯಕ್ತಿಯೋರ್ವರು ಕಾವೇರಿ ಆರತಿ ಆಗುತ್ತಿರುವ ಸಂದರ್ಭ ಕಿರುಸೇತುವೆ ಮೇಲಿಂದ ಆಕಸ್ಮಿಕವಾಗಿ ನದಿಗೆ ಬಿದ್ದಿದ್ದು ಸಾವು ಬದುಕಿನ ನಡುವೆ ಹೋರಾಟದಲ್ಲಿದ್ದ ವ್ಯಕ್ತಿಯನ್ನು ಯವಕನೋರ್ವ ರಕ್ಷಣೆ ಮಾಡಿದ್ದಾನೆ.

ಆಯ ತಪ್ಪಿ ನದಿಗೆ ಬಿದ್ದ ಹೊದ್ದೂರು ಗ್ರಾಮದ ಕಬಡಕೇರಿ ನಿವಾಸಿ ವಾಸು ಎಂಬವರನ್ನು ಎಂ.ಆರ್. ಬಿಪಿನ್ ಹಾಗೂ ಸ್ಥಳೀಯರು ಹರಸಾಹಸದಿಂದ ರಕ್ಷಿಸಿ ಪ್ರಾಣಾಪಾಯದಿಂದ ಕಾಪಾಡಿದ್ದಾರೆ.

ಕಾವೇರಿ ಆರತಿ ಆಗುತ್ತಿರುವ ಸಂದರ್ಭ ಈ ಸೇತುವೆ ಮೇಲೆ ವಾಸು ನಡೆದು ಬರುತ್ತಿದ್ದರು. ಇದೇ ವೇಳೆ ವಾಹನವೊಂದು ಬಂದಿದ್ದರಿAದ ಸೇತುವೆ ಅಂಚಿಗೆ ಬಂದು ಆಯತಪ್ಪಿದ ವಾಸು, ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ಭಾರೀ ಪ್ರಮಾಣದ ನೀರಿತ್ತು. ನದಿಗೆ ಬಿದ್ದ ವಾಸು ಜೀವನ್ಮರಣದ ನಡುವೆ ತೇಲಿ ಹೋಗುತ್ತಿದ್ದುದನ್ನು ಗಮನಿಸಿದ ಜನಸ್ತೋಮ ಸಹಾಯಕ್ಕಾಗಿ ಕಿರುಚಿಕೊಂಡಿದ್ದರು. ಇದೇ ವೇಳೆ ಸ್ಥಳೀಯ ನಿವಾಸಿ

(ಮೊದಲ ಪುಟದಿಂದ) ಈಜು ಪರಿಣಿತ ಚಾಲಕ ಬಿಪಿನ್ ಎಂಬವರು ಧೈರ್ಯ ಮಾಡಿ ನದಿಗೆ ಹಾರಿ ವಾಸು ಜೀವರಕ್ಷಣೆಗೆ ಪ್ರಯತ್ನಿಸಿ ಅದಾಗಲೇ ನದಿಯಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ವಾಸುವಿನ ಕೂದಲು ಹಿಡಿದು ತೀರಕ್ಕೆ ಎಳೆದುತಂದಿದ್ದಾರೆ. ನೆರೆದಿದ್ದವರ ಸಹಕಾರದಿಂದ ಅಂಗಾತ ಮಲಗಿಸಿ ಹೊಟ್ಟೆಯಲ್ಲಿದ್ದ ನೀರನ್ನು ಹೊರತೆಗೆಯಲಾಯ್ತು. ನಂತರ ಸ್ಥಳದಲ್ಲಿ ಇದ್ದ ಪೊಲೀಸರು ಅವರ ಸಂಬAಧಿಕರಿಗೆ ವಿಷಯವನ್ನು ತಿಳಿಸಿದ ಬಳಿಕ ಮನೆಗೆ ಕಳುಹಿಸಲಾಯಿತು. ಈ ಸಂದರ್ಭ ಬಿಪಿನ್ ಅವರ ಸಮಯಪ್ರಜ್ಞೆ ಮತ್ತು ಸಾಹಸದ ಬಗ್ಗೆ ನೆರೆದ ಜನಸ್ತೋಮ ಮೆಚ್ಚುಗೆ ವ್ಯಕ್ತಪಡಿಸಿ ಕೊಂಡಾಡಿದರು. .ಈ ದುರ್ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿತ್ತು. ಜಾತ್ರೆಗೆ ಬಂದಿದ್ದ ಭಕ್ತಾದಿಗಳು ಉತ್ಸವವನ್ನು ಮರೆತು ಅವಘಡ ಮತ್ತು ಜೀವ ರಕ್ಷಣೆಯ ದೃಶ್ಯಗಳನ್ನು ನೋಡಬೇಕಾಯಿತು. -ದುಗ್ಗಳ ಸದಾನಂದ